Monday, September 25, 2023

Latest Posts

HEALTH| ಇವುಗಳನ್ನು ಬೆಳಗಿನ ಉಪಹಾರವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳಿಗ್ಗೆ ನಾವು ತೆಗೆದುಕೊಳ್ಳುವ ಆಹಾರ ಆ ದಿನವೆಲ್ಲಾ ನಮ್ಮನ್ನು ಲವಲವಿಕೆಯಿಂದ, ಸಂತೋಷದಿಂದ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಸರಿಯಾದ ಆಹಾರ ನಮ್ಮ ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ.

ಪೋಷಣೆಯ ಕೊರತೆಯಿರುವ ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಸಕ್ಕರೆ ಹೆಚ್ಚಿರುವ ಊಟವನ್ನು ತಿನ್ನುವುದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಡಯಾಬಿಟೀಸ್ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

1. ಕಾಫಿ; ಎದ್ದ ಕೂಡಲೇ ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೆಫೀನ್‌ನ ಪರಿಣಾಮಗಳನ್ನು ತಪ್ಪಿಸಲು ಬೆಳಗಿನ ಉಪಾಹಾರದ ನಂತರ ಕಾಫಿ ಕುಡಿಯುವುದು ಉತ್ತಮ.

2. ಹಣ್ಣಿನ ಜ್ಯೂಸ್;

‌ಹಣ್ಣಿಗೆ ಜ್ಯೂಸ್‌ ಮಾಡಲು ಸಕ್ಕರೆ ಬಳಸೇ ಬಳಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮಧುಮೇಹ ಮತ್ತು ಇತರ ಚಯಾಪಚಯ ಅಸ್ವಸ್ಥತೆ ಇರುವವರು ಜ್ಯೂಸ್ ಬದಲಿಗೆ ಹಣ್ಣುಗಳನ್ನು ಸೇವಿಸಬೇಕು.

4. ಪ್ಯಾನ್ ಕೇಕ್ ಮತ್ತು ದೋಸೆಗಳು;

ಬೆಳಿಗ್ಗೆ ತಿಂಡಿ ತಿನ್ನಲು ಸಮಯವಿಲ್ಲದ ಜನರು ಪ್ಯಾನ್‌ಕೇಕ್‌ಗಳು ಮತ್ತು ದೋಸೆಗಳಂತಹ ಆಹಾರವನ್ನು ತಿನ್ನುತ್ತಾರೆ. ಬೆಳಗ್ಗೆ ಅವುಗಳನ್ನು ತಿನ್ನುವುದು ದಿನವಿಡೀ ಅನಾರೋಗ್ಯಕರ ಆಹಾರಕ್ಕಾಗಿ ಕಡುಬಯಕೆಗೆ ಕಾರಣವಾಗಬಹುದು. ಕಡಿಮೆ ಶಕ್ತಿ, ಕಡಿಮೆ ಉತ್ಪಾದಕತೆ ಸಾಧ್ಯತೆಯಿದೆ. ಆದ್ದರಿಂದ, ಜಾಗರೂಕರಾಗಿರಿ.

5. ಚಹಾ;

ಎದ್ದ ತಕ್ಷಣ ಚಹಾ ಕುಡಿಯುವುದು ಕಾಫಿಗಿಂತ ಹೆಚ್ಚು ಹಾನಿ ಮಾಡುತ್ತದೆ. ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಕೆಫೀನ್ ಮತ್ತು ನಿಕೋಟಿನ್ ಸೇವಿಸುವುದರಿಂದ ಆಮ್ಲೀಯತೆ, ಎದೆಯುರಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!