ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಅಂಬಾನಿ ಮಗನ ಮದುವೆ ಗ್ರ್ಯಾಂಡ್ ಆಗಿ ನಡೆದಿದೆ. ಚಂದನವನದಿಂದ ರಾಕಿ ಭಾಯ್ ಯಶ್ ಹಾಗೂ ರಾಧಿಕಾ ಪಂಡಿತ್ ಮಾತ್ರ ಅಂಬಾನಿ ಮಗನ ಮದುವೆಗೆ ಹೋಗಿದ್ದರು.
ನಟ ಕಿಚ್ಚ ಸುದೀಪಗೂ ಕೂಡ ಇನ್ವೈಟ್ ಸಿಕ್ಕಿದೆ, ಆದರೆ ಸುದೀಪ್ ಫ್ಯಾಮಿಲಿ ಅಂಬಾನಿ ಮಗನ ಮದುವೆಗೆ ಹಾಜರಾಗಿಲ್ಲ. ಈ ಬಗ್ಗೆ ನಟ ಮಾತನಾಡಿದ್ದಾರೆ.
ನನಗೆ ಸ್ವಲ್ಪ ಹುಷಾರಿರಲಿಲ್ಲ. ಅಲ್ಲಿ ತುಂಬ ಕಟ್ಟುನಿಟ್ಟಾದ ಪ್ರೋಟೋಕಾಲ್ ಇತ್ತು. ಶೀತ, ಜ್ವರ ಇತ್ಯಾದಿ ಇದ್ದರೆ ಆರ್ಟಿಪಿಸಿಆರ್ ಮಾಡಬೇಕಿತ್ತು. ಅದರಿಂದ ನನಗೆ ಕಂಫರ್ಟ್ ಇರಲಿಲ್ಲ. ನನಗೆ ಸ್ವಲ್ಪ ಟೆಂಪ್ರೇಚರ್ ಇತ್ತು. ಬೇರೆ ಬೇರೆ ಕೆಲಸಗಳಲ್ಲಿ ನಾನು ತೊಡಗಿಕೊಂಡಿದ್ದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿದ ಬಳಿಕ ಜ್ವರ ಇದೆ ಅಂತ ಒಳಗೆ ಬಿಡದಿದ್ದರೆ? ಅಲ್ಲಿತನಕ ಹೋಗಿ ವಾಪಸ್ ಬಂದರೆ ತಪ್ಪಾಗುತ್ತದೆ. ಸಂಬಂಧಿಸಿದವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ’ ಎಂದು ಸುದೀಪ್ ಹೇಳಿದ್ದಾರೆ.