CINE| ನಿರ್ದೇಶಕ ರಾಜಮೌಳಿ ತಂದೆಯ ಜೊತೆ ಕಿಚ್ಚನ ಗ್ಲೋಬಲ್‌ ಮೂವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟ ಕಿಚ್ಚ ಸುದೀಪ್‌ಗೆ ಕನ್ನಡ ಅಷ್ಟೇ ಅಲ್ಲ, ತೆಲುಗಿನಲ್ಲೂ ಒಳ್ಳೆಯ ಬೇಡಿಕೆ ಇದೆ. ಬ್ಲಾಕ್ ಬಸ್ಟರ್ ಸಿನಿಮಾ ʻಈಗʼ ಮೂಲಕ ತೆಲುಗು ಪ್ರೇಕ್ಷಕರಿಗೆ ರಾಜಮೌಳಿ ಪರಿಚಯ ಮಾಡಿಕೊಟ್ಟರು. ಇದೀಗ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಜೊತೆ ಸುದೀಪ್ ಮತ್ತೊಮ್ಮೆ ಕೆಲಸ ಮಾಡುತ್ತಿದ್ದಾರೆ ಎಂಬುದು ದೃಢಪಟ್ಟಿದೆ.

ಇಂದು ನಾಯಕ ಪವನ್ ಕಲ್ಯಾಣ್ ಹಾಗೂ ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ತಮ್ಮ ಅಭಿನಯದಿಂದ ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದ ಪ್ರೇಕ್ಷಕರ ಮನಗೆದ್ದ ಅವರು, ಹುಟ್ಟುಹಬ್ಬದಂದು ಸಿನಿ ಗಣ್ಯರು, ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸುದೀಪ್‌ ಹುಟ್ಟುಹಬ್ಬಕ್ಕೆ ಆರ್.ಸಿ.ಸ್ಟುಡಿಯೋಸ್ ಉಡುಗೊರೆಯಾಗಿ ಅದ್ಧೂರಿ ಬಜೆಟ್‌ನ ಜಾಗತಿಕ ಪ್ರಾಜೆಕ್ಟ್ ಘೋಷಿಸಿದೆ. ಮತ್ತು ಇತ್ತೀಚೆಗಷ್ಟೇ ಈ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಮಾಡಿದ “ಕಬ್ಜಾ’ ಚಿತ್ರದ ನಿರ್ದೇಶಕ ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಈ ದೊಡ್ಡ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದುವರೆಗೆ ತೆರೆಕಂಡ ಎಲ್ಲಾ ಸಿನಿಮಾಗಳು ಎಲ್ಲರ ಮನಸೂರೆಗೊಂಡಿವೆ. ಈ ಸಿನಿಮಾ ಕೂಡ ಒಳ್ಳೆ ಹಿಟ್ ಆಗುತ್ತೆ ಅನ್ನೋ ನಂಬಿಕೆ ಅಭಿಮಾನಿಗಳದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!