ಪಾಕಿಸ್ತಾನದಲ್ಲಿ 16 ವರ್ಷದ ಹಿಂದೂಯುವತಿಯ ಅಪಹರಣ: ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತದ ವಿವಾಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹದಿಹರೆಯದ ಹಿಂದೂ ಯುವತಿಯನ್ನು ಅಪಹರಿಸಿ ಆಕಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ ಘಟನೆ ಪಾಕಿಸ್ತಾನದ ಸಿಂಧ್‌ ಪ್ರದೇಶದಲ್ಲಿ ನಡೆದಿದೆ. 16 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಆಕೆಯ ವಿವಾಹವನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮಾಡಲಾಗಿದೆ. ಅಪಹರಸಿದ ನಂತರ ಮೊದಲು ಆಕೆಯನ್ನು ಇಸ್ಲಾಂ ಗೆ ಮತಾಂತರಿಸಲಾಗಿದೆ ಎನ್ನಲಾಗಿದೆ.

ಇದನ್ನು ವಿರೋಧಿಸಿ ಸಿಂಧ್‌ ಪ್ರದೇಶದ ಹಿಂದೂ ಸಮುದಾಯವು ನವಾಬ್‌ಶಾಹ್‌ನಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರ ಮನೆಯ ಮುಂದೆ ಪ್ರತಿಭಟನೆ ನಡೆಸಿದೆ. ಸಿಂಧ್ ಪ್ರಾಂತ್ಯದ ಖಾಜಿ ಅಹ್ಮದ್ ನಗರದಲ್ಲಿ ಒಂದು ವಾರದ ಹಿಂದೆ ಬಾಲಕಿಯನ್ನು ಅಪಹರಿಸಲಾಗಿತ್ತು ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!