KIDS SPL | ಪುಟಾಣಿ ಮಕ್ಕಳಿಗೆ ಮನೆಯಲ್ಲೇ ತಯಾರಿಸಿ ಕೊಡಿ ಟೇಸ್ಟಿ ಸ್ಟ್ರಾಬೆರಿ ಚಾಕಲೇಟ್, ಇಲ್ಲಿದೆ ರೆಸಿಪಿ

ಮಕ್ಕಳು ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುವುದಿಲ್ಲ. ಆದರೆ ಚಾಕೊಲೇಟ್ ಅನ್ನು ಇಷ್ಟಪಡುತ್ತಾರೆ. ಈ ಚಾಕೊಲೇಟ್‌ಗೆ ಹಣ್ಣುಗಳನ್ನು ಸೇರಿಸುವುದರಿಂದ ಆರೋಗ್ಯದ ಲಾಭವೂ ಇದೆ. ಮಕ್ಕಳು ಕೂಡ ಸಂತೋಷದಿಂದ ತಿನ್ನುತ್ತಾರೆ. ಹೌದು, ಅದಕ್ಕಾಗಿ ಮನೆಯಲ್ಲೇ ಮಕ್ಕಳಿಗೆ ಮಾಡಿ ಕೊಡಿ ಟೇಸ್ಟಿ ಸ್ಟ್ರಾಬೆರಿ ಚಾಕೋಲೆಟ್..

ಸ್ಟ್ರಾಬೆರಿ ಚಾಕೋಲೆಟ್ ಗೆ ಬೇಕಾಗುವ ಪದಾರ್ಥ:

4- ಸ್ಟ್ರಾಬೆರಿ
1 3/4 ಕಪ್ ಕಾಯಿ ತುರಿ
3/4 ಕಪ್ ಮೇಪಲ್ ಸಿರಪ್
150 ಗ್ರಾಂ ಕೊಕೊನಟ್ ಕ್ರೀಂ
2 ಚಮಚ ತೆಂಗಿನ ಎಣ್ಣೆ
1 ಚಮಚ ವೆನಿಲಾ ಎಸೆನ್ಸ್
200 ಗ್ರಾಂ ಕಪ್ಪು ಚಾಕೋಲೆಟ್

ಸ್ಟ್ರಾಬೆರಿ ಚಾಕೋಲೆಟ್ ಮಾಡುವ ವಿಧಾನ :

ಸ್ಟ್ರಾಬೆರಿಗಳನ್ನು ಸ್ವಲ್ಪ ಸಮಯದವರೆಗೆ ಫ್ರೀಜರ್‌ನಲ್ಲಿ ಇರಿಸಿ. ಪ್ರತ್ಯೇಕ ಪಾತ್ರೆಯಲ್ಲಿ, ತುರಿದ ತೆಂಗಿನಕಾಯಿ, ಮೇಪಲ್ ಸಿರಪ್, ತೆಂಗಿನಕಾಯಿ ಕ್ರೀಮ್, ವೆನಿಲ್ಲಾ ಎಸೆನ್ಸ್ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಸ್ಟ್ರಾಬೆರಿಗಳನ್ನು ಕತ್ತರಿಸಿ ಮತ್ತು ಈ ಮಿಶ್ರಣಕ್ಕೆ ಸೇರಿಸಿ. ಸಣ್ಣ ಚಾಕೋಲೆಟ್ ಆಕಾರದಲ್ಲಿ ಬಾರ್ ತಯಾರಿಸಿಕೊಳ್ಳಿ. ಇದನ್ನು ಸ್ವಲ್ಪ ಸಮಯ ಫ್ರೀಜರ್ ನಲ್ಲಿಡಿ.

ಪ್ಯಾನ್‌ನಲ್ಲಿ ಚಾಕೊಲೇಟ್ ಅನ್ನು ಬಿಸಿ ಮಾಡಿ ಕರಗಿಸಿಕೊಳ್ಳಿ. ನಂತರ ಫ್ರೀಜರ್‌ನಿಂದ ಚಾಕೋಲೆಟ್ ಬಾರ್‌ಗಳನ್ನು ತೆಗೆದುಕೊಂಡು, ಪ್ರತಿಯೊಂದಕ್ಕೂ ಕರಗಿಸಿಕೊಂಡಿರುವ ಚಾಕೊಲೇಟ್ ಅನ್ನು ಸೇರಿಸಿ ಮತ್ತು ಅವುಗಳನ್ನು ಮತ್ತೆ ಫ್ರೀಜರ್‌ನಲ್ಲಿ ಇರಿಸಿ. ಸ್ವಲ್ಪ ಸಮಯದ ನಂತರ, ಅದನ್ನು ಫ್ರೀಜರ್‌ನಿಂದ ಹೊರತೆಗೆದು ಮಕ್ಕಳಿಗೆ ತಿನ್ನಲು ಕೊಡಿ. ಟೇಸ್ಟಿ ಸ್ಟ್ರಾಬೆರಿ ಚಾಕೋಲೆಟ್ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!