KIDS SPL | ನಿಮ್ಮ ಮಕ್ಕಳಿಗೆ ಟೇಸ್ಟಿ ವೆಜಿಟೇಬಲ್ ಚೀಸ್ ದೋಸೆ ಮಾಡಿಕೊಟ್ರೆ, ಒನ್ ಮೋರ್ ಕೇಳೋದು ಪಕ್ಕಾ

ಬೇಕಾಗುವ ಸಾಮಗ್ರಿಗಳು :

ರುಬ್ಬಿದ ದೋಸೆ ಹಿಟ್ಟು
ಸ್ಪಿಂಗ್ ಆನಿಯನ್ಸ್- 50 ಗ್ರಾಂ
ಚೀಸ್- 4 ಚಮಚ
ಕ್ಯಾಪ್ಟಿಕಂ- 2
ಕತ್ತರಿಸಿದ ಕ್ಯಾರೆಟ್- 2
ಟೊಮೇಟೋ-1
ರಿಫ್ರೆಂಡ್ ಎಣ್ಣೆ – 3 ಚಮಚ.

ಮಾಡುವ ವಿಧಾನ :

ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಮೆಣಸು, ಈರುಳ್ಳಿ, ಕ್ಯಾರೆಟ್ ಮತ್ತು ಟೊಮೆಟೊಗಳನ್ನು ಸೇರಿಸಿ ಮತ್ತು ಸ್ವಲ್ಪ ಫ್ರೈ ಮಾಡಿ. ಮೀಡಿಯಂ ಸಿಮ್ ನಲ್ಲಿ ನಾನ್ ಸ್ಟಿಕ್ ತವಾವನ್ನು ಬಿಸಿ ಮಾಡಿಕೊಳ್ಳಿ.

ನಂತರ ದೋಸೆ ಹಿಟ್ಟನ್ನು ವೃತ್ತಾಕಾರವಾಗಿ ಹರಡಿ ಮತ್ತು ಎಣ್ಣೆಯಿಂದ ಅಂಚುಗಳನ್ನು ಬ್ರಷ್ ಮಾಡಿ. ಹುರಿದ ಮಿಶ್ರಣವನ್ನು ದೋಸೆಯ ಮೇಲೆ ಹಾಕಿ ಮತ್ತು ಅದರ ಮೇಲೆ ಕ್ರೀಮ್ ಚೀಸ್ ಹಾಕಿ.

ನಂತರ ದೋಸೆಯನ್ನು ರೋಲ್ ಮಾಡಿ ಎರಡು ತುಂಡುಗಳಾಗುವಂತೆ ಮಧ್ಯಕ್ಕೆ ಕಟ್ ಮಾಡಿ. ಒಂದು ಪ್ಲೇಟ್ ನಲ್ಲಿ ಕಾಯಿ ಚಟ್ಟಿ ಅಥವಾ ಪುದೀನಾ ಚಟ್ಟಿಯೊಂದಿಗೆ ಸರ್ವ್ ಮಾಡಿ. ನಿಮ್ಮ ಸಂಜೆಯ ಕಾಫಿ ಅಥವಾ ಚಹಾದೊಂದಿಗೆ ರುಚಿಕರವಾದ ತಿಂಡಿಯಾಗಿ ಇದನ್ನು ಆನಂದಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!