ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಕಿಲ್ಲರ್ ತಿಮಿಂಗಿಲಗಳು ಕಾಣಿಸಿಕೊಂಡಿವೆ.
ಹೌದು, ನೇತ್ರಾಣಿ ದ್ವೀಪಕ್ಕೆ ಸ್ಕೂಬಾ ಡೈವಿಂಗ್ ಮಾಡಲು ಪ್ರವಾಸಿಗರು ತೆರಳಿದ್ದ ವೇಳೆ ತಿಮಿಂಗಿಲಗಳು ಕಾಣಿಸಿಕೊಂಡಿವೆ.
ಸ್ಕೂಬಾ ಡೈವಿಂಗ್ ಮಾಡಲು ಅಣಿಯಾಗಿದ್ದ ಸಿಬ್ಬಂದಿ ತಿಮಿಂಗಿಲಗಳು ದೂರ ಹೋಗಿದ್ದನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ಮೂರು ತಿಮಿಂಗಿಲಗಳಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ನಮ್ಮ ಬೋಟ್ ಸುತ್ತ ಸುತ್ತುತ್ತಿದ್ದವು. ಪ್ರತೀ ವರ್ಷವು ಇವು ಕಾಣಿಸುತ್ತವೆ ಎಂದು ಹೇಳಲಾಗುತ್ತದೆ.