ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಶದ ಸೈನಿಕರನ್ನು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು (Terrorists) ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ದೇಶದ ಜೊತೆ ನೀವು ವಿಶ್ವಕಪ್ ಪಂದ್ಯ ಆಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಕುರಿತು ಮಾತನಾಡಿ, ಎಎಸ್‌ಐ ವರದಿ ಬಂದಾಗ ಬಿಜೆಪಿ-ಆರ್‌ಎಸ್‌ಎಸ್ ಏನು ಮಾತನಾಡುತ್ತೋ ಎಂಬ ಆತಂಕ ನಮಗಿದೆ. ಅದು ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಡಿಸೆಂಬರ್ 23 ಅಥವಾ ಡಿಸೆಂಬರ್ 6 (ಬಾಬರಿ ಮಸೀದಿ ಧ್ವಂಸ) ರಂತಹ ಘಟನೆಯ ಬಗ್ಗೆ ನನಗೆ ಆತಂಕವಿದೆ. ಬಾಬರಿ ಮಸೀದಿಯಂತಹ ಸಮಸ್ಯೆಗಳು ಉದ್ಭವಿಸುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.