ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಮಹಿಳೆಯರ ಮೇಲೆ ಮತ್ತೊಂದು ನಿರ್ಬಂಧನೆಯನ್ನು ಹೇರಿದ್ದಾರೆ. ಉತ್ತರ ಕೊರಿಯಾದಲ್ಲಿ ಇನ್ಮುಂದೆ ಮಹಿಳೆಯರು ಬೋಲ್ಡ್ ಆದ ರೆಡ್ ಲಿಪ್ಸ್‌ಟಿಕ್ ಹಾಕುವಂತಿಲ್ಲ ಎಂದು ಕಿಮ್ ಆದೇಶ ಹೊರಡಿಸಿದ್ದಾರೆ.
ಮಹಿಳೆಯರು ಹಾಕುವ ಲಿಪ್‌ಸ್ಟಿಕ್ ಮೇಲೂ ಕಿಮ್ ಜಾಂಗ್ ಉನ್ ಕಣ್ಣು ಬಿದ್ದಿದೆ. ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ವಿಮೋಚನೆ ಮತ್ತು ಸ್ತ್ರೀಲಿಂಗ ಆಕರ್ಷಣೆಯೊಂದಿಗೆ ಹೆಚ್ಚಾಗಿ ಸಂಬಂಧಿಸಿರುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬಂಡವಾಳಶಾಹಿ ಅವನತಿ ಮತ್ತು ನೈತಿಕ ಅವನತಿಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಕಿಮ್ ಅಭಿಪ್ರಾಯವಾಗಿದೆ.
ಈ ದೇಶದಲ್ಲಿ ಹೇರ್‌ಸ್ಟೈಲ್, ಮೇಕಪ್, ಸಿನಿಮಾ ಇನ್ನಿತರ ವಿಷಯಗಳಿಗೂ ನಿರ್ಬಂಧನೆ ಇದೆ.