ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಯಶಸ್ವಿ ಬ್ಯಾಟರ್ ವಿರಾಟ್ ಕೊಹ್ಲಿ ಜನ್ಮದಿನ. ೩೪ನೇ ವಸಂತಕ್ಕೆ ಕಿಂಗ್ ಕೊಹ್ಲಿ ಕಾಲಿಟ್ಟಿದ್ದು, ಅಭಿಮಾನಿಗಳು, ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ.
ಆರಂಭಿಕ ದಿನಗಳಲ್ಲಿ ವೈಫಲ್ಯ ಎದುರಿಸಿದ ಕೊಹ್ಲಿ ನಂತರ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರು. ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.
ಕವರ್ ಡ್ರೈವ್, ಕ್ಲಾಸಿಕ್ ಹೊಡೆತಗಳಿಗೆ ವಿರಾಟ್ ಹೆಸರುವಾಸಿ. ಸಿಕ್ಸರ್‌ಗಳಿಂತ ಫೋರ್ ಮೇಲೆ ಕೊಹ್ಲಿ ಹೆಚ್ಚು ನಂಬಿಕೆ ಇಡುವ ಪ್ಲೇಯರ್. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕೊಹ್ಲಿ ಭಾಜನವಾಗಿದ್ದಾರೆ. ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವರಿಸಿದ್ದು, ಬಾಲಿವುಡ್ ಮಂದಿ ಕೂಡ ಕೊಹ್ಲಿಗೆ ಬರ್ಥ್‌ಡೇ ವಿಶಸ್ ತಿಳಿಸಿದ್ದಾರೆ.