ಮತ್ತೊಮ್ಮೆ ಭಾರತವನ್ನು ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದು ವಾರದ ಹಿಂದಷ್ಟೇ ಪ್ರದಾನಿ ಮೋದಿಯವರನ್ನು ಕೊಂಡಾಡಿದ ರಷ್ಯಾದ ಅದ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಇದೀಗ ಭಾರತದ ನಾಗರಿಕರನ್ನು ಹೊಗಳಿದ್ದಾರೆ. ಭಾರತದ ನಾಗರಿಕರು ʼಪ್ರತಿಭಾವಂತರುʼ ಮತ್ತು ʼಚಲನಶೀಲರುʼ ಎಂದು ಕೆರಯುವ ಮೂಲಕ ಹೊಗಳಿದ್ದಾರೆ.

ಶುಕ್ರವಾರ ರಷ್ಯಾದ ಏಕತಾ ದಿನದ ಸಂದರ್ಭದಲ್ಲಿ ಮಾತನಾಡಿದ ಪುಟಿನ್ “ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಭಾರತವು ಅತ್ಯಂತ ಪ್ರತಿಭಾವಂತ ನಾಗರಿಕರನ್ನು ಹೊಂದಿದೆ. ಮತ್ತು ಸುಮಾರು ಒಂದೂವರೆ ಶತಕೋಟಿ ಜನರ ಸಾಮರ್ಥ್ಯ ಹೊಂದಿದೆ” ಎಂದಿದ್ದಾರೆ. ಮೂಲತಃ ರಷ್ಯನ್‌ ಭಾಷೆಯಲ್ಲಿರುವ ಅವರ ಭಾಷಣವನ್ನು ಭಾಷಾಂತರಿಸಿ ಸುದ್ದಿ ಸಂಸ್ಥೆ ಏಎನ್‌ಐ ವರದಿ ಮಾಡಿದೆ.

“ಭಾರತವು ಆಂತರಿಕ ಅಭಿವೃದ್ಧಿಗಾಗಿ ಚಲನಶೀಲತೆಯೊಂದಿಗೆ ಪ್ರತಿಭಾವಂತ ಜನರನ್ನು ಹೊಂದಿದೆ. ಇದು (ಭಾರತ) ಖಂಡಿತವಾಗಿಯೂ ಅದರ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ” ಎಂದು ಪುಟಿನ್‌ ಹೇಳಿದ್ದಾರೆ.

ಕಳೆದ ವಾರವಷ್ಟೇ ಪುಟಿನ್ ಪ್ರಧಾನಿ ಮೋದಿಯವರ ಸ್ವತಂತ್ರ ವಿದೇಶಾಂಗ ನೀತಿಗಳನ್ನು ಶ್ಲಾಘಿಸಿದ್ದರು ಮತ್ತು ಅವರು ನಿಜವಾದ ದೇಶಭಕ್ತ ಎಂದು ಹೇಳಿದರು “ಪ್ರಧಾನಿ ಮೋದಿ ಅವರು ತಮ್ಮ ದೇಶದ ಮತ್ತು ಅವರ ಜನರ ಹಿತಾಸಕ್ತಿಗಾಗಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿರುವ ವಿಶ್ವದ ವ್ಯಕ್ತಿಗಳಲ್ಲಿ ಒಬ್ಬರು, ಅವರನ್ನು ತಡೆಯಲು ಸಾಧ್ಯವಿಲ್ಲ” ಎಂದಿದ್ದರು. ಪ್ರಸ್ತುತ ಭಾರತದ ನಾಗರಿಕರನ್ನು ಪುಟಿನ್‌ ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!