February 6, 2026
Friday, February 6, 2026
spot_img

Kitchen Tips | ಎಷ್ಟೇ ತಿಕ್ಕಿ ತಿಕ್ಕಿ ತೊಳೆದ್ರೂ ಸುಟ್ಟು ಹೋದ ಪಾತ್ರೆಯ ಕಲೆ ಹೋಗ್ತಿಲ್ವ? ಈ ಟಿಪ್ಸ್ ಟ್ರೈ ಮಾಡಿ!

ಅಡುಗೆ ಮಾಡುವಾಗ ಪಾತ್ರೆ ಸುಡುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ಹಾಲು ಕುದಿಯುವಾಗ ಅಥವಾ ಪಲ್ಯ ಬೇಯಿಸುವಾಗ ಪಾತ್ರೆಯ ಕೆಳಭಾಗದಲ್ಲಿ ಕಪ್ಪು ಕಲೆಗಳು ಅಂಟಿಕೊಂಡು ಬಿಡುತ್ತವೆ. ಎಷ್ಟೇ ಸಾಬೂನು ಹಾಕಿ ತೊಳೆದರೂ ಅವು ಸರಿಯಾಗಿ ಹೋಗುವುದಿಲ್ಲ. ಅಂಥ ಸಮಯದಲ್ಲಿ ಕಷ್ಟಪಟ್ಟು ತಿಕ್ಕುವುದರಿಂದ ಪಾತ್ರೆಗೂ ಹಾನಿಯಾಗಬಹುದು. ಆದರೆ ಮನೆಯಲ್ಲೇ ಸಿಗುವ ಕೆಲವು ಸರಳ ವಸ್ತುಗಳನ್ನು ಬಳಸಿ ಸುಟ್ಟ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಸುಟ್ಟ ಪಾತ್ರೆಗೆ ನೀರು ಹಾಕಿ ಅದರಲ್ಲಿ ಎರಡು ಚಮಚ ಬೇಕಿಂಗ್ ಸೋಡಾ ಸೇರಿಸಿ 10–15 ನಿಮಿಷ ಕುದಿಸಿ. ನಂತರ ತಣ್ಣಗಾದ ಮೇಲೆ ಸ್ವಲ್ಪ ತಿಕ್ಕಿದರೆ ಕಲೆಗಳು ಸುಲಭವಾಗಿ ಬಿಡುತ್ತವೆ.

ನಿಂಬೆಹಣ್ಣಿನ ರಸವನ್ನು ಸುಟ್ಟ ಭಾಗದ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ಕಪ್ಪು ಕಲೆ ನಿಧಾನವಾಗಿ ಹೋಗಲು ಶುರುವಾಗುತ್ತದೆ. ಇದು ನೈಸರ್ಗಿಕವಾಗಿ ಕ್ಲೀನ್ ಮಾಡುವ ವಿಧಾನ.

ಇದನ್ನೂ ಓದಿ:

ಪಾತ್ರೆಯಲ್ಲಿ ಸ್ವಲ್ಪ ವಿನೆಗರ್ ಮತ್ತು ನೀರು ಹಾಕಿ ಕುದಿಸಿ. ಕುದಿದ ನಂತರ ಅದನ್ನು 15 ನಿಮಿಷ ಹಾಗೇ ಬಿಡಿ. ನಂತರ ತೊಳೆದರೆ ಸುಟ್ಟ ಭಾಗ ಮಾಯಾ.

ಬಿಸಿ ನೀರಿಗೆ ಉಪ್ಪು ಹಾಕಿ ಪಾತ್ರೆಯಲ್ಲಿ 20 ನಿಮಿಷ ನೆನೆಸಿಡಿ. ಬಳಿಕ ಸ್ವಲ್ಪ ತಿಕ್ಕಿದರೆ ಕಠಿಣ ಕಲೆಗಳು ಕೂಡ ಬೇಗ ಬಿಡುತ್ತವೆ.

ಪಾತ್ರೆ ಸುಟ್ಟಾಗ ತಕ್ಷಣ ಕಠಿಣವಾಗಿ ತಿಕ್ಕುವುದರಿಂದ ಮೇಲ್ಮೈ ಹಾಳಾಗಬಹುದು. ಮೊದಲು ನೆನೆಸಿಟ್ಟು ನಂತರ ಮೃದುವಾಗಿ ತೊಳೆಯುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !