March 21, 2026
Saturday, March 21, 2026
spot_img

ಅಫ್ಘಾನ್ ಬೌಲಿಂಗ್ ಕೋಟೆಗೆ ಕಿವೀಸ್ ಲಗ್ಗೆ: 25 ಪಂದ್ಯಗಳ ಅಜೇಯ ದಾಖಲೆ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಮರೆಯಲಾಗದ ಸೋಲು. ಇದುವರೆಗೆ ‘ಬೃಹತ್ ಮೊತ್ತ ಎಂದರೆ ಗೆಲುವು ಖಚಿತ’ ಎಂಬಂತಿದ್ದ ಅಫ್ಘಾನಿಸ್ತಾನ್ ತಂಡದ ಅಜೇಯ ದಾಖಲೆಯನ್ನ ನ್ಯೂಝಿಲೆಂಡ್ ತಂಡ ಪುಡಿಪುಡಿ ಮಾಡಿದೆ.

ಅಫ್ಘಾನಿಸ್ತಾನ್ ತಂಡ ಈವರೆಗೆ ಒಟ್ಟು 160 ಟಿ20 ಪಂದ್ಯಗಳನ್ನಾಡಿದ್ದು, ಅದರಲ್ಲಿ 96 ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಗೆಲುವಿನ ಪಯಣದಲ್ಲಿ ಒಂದು ಕುತೂಹಲಕಾರಿ ದಾಖಲೆಯಿತ್ತು. ಏನೆಂದರೆ, ಅಫ್ಘಾನ್ ಪಡೆ ಮೊದಲು ಬ್ಯಾಟ್ ಮಾಡಿ 180ಕ್ಕೂ ಹೆಚ್ಚು ರನ್ ಗಳಿಸಿದರೆ ಆ ಪಂದ್ಯ ಸೋತ ಇತಿಹಾಸವೇ ಇರಲಿಲ್ಲ. ಈವರೆಗೆ ಆಡಿದ 25 ಪಂದ್ಯಗಳಲ್ಲಿ ಅಫ್ಘಾನಿಸ್ತಾನ್ 180+ ಸ್ಕೋರ್ ಬಾರಿಸಿ ಅಜೇಯವಾಗಿ ಉಳಿದಿತ್ತು. ಆದರೆ ನ್ಯೂಝಿಲೆಂಡ್ ವಿರುದ್ಧದ 26ನೇ ಪ್ರಯತ್ನದಲ್ಲಿ ಈ ಸುದೀರ್ಘ ಗೆಲುವಿನ ಸರಣಿಗೆ ಅಂತ್ಯ ಹಾಡಲಾಗಿದೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತ್ತು. ರಶೀದ್ ಖಾನ್ ಮತ್ತು ಬೌಲರ್ ಪಡೆಯ ಬಲದಿಂದ ಈ ಮೊತ್ತವನ್ನು ರಕ್ಷಿಸಬಹುದು ಎಂಬ ವಿಶ್ವಾಸದಲ್ಲಿದ್ದ ಅಫ್ಘಾನ್ ಪಡೆಗೆ ನ್ಯೂಝಿಲೆಂಡ್ ಬ್ಯಾಟರ್‌ಗಳು ಶಾಕ್ ನೀಡಿದರು.

ಇದನ್ನೂ ಓದಿ:

ಕೇವಲ 17.5 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆ, 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಅಫ್ಘಾನಿಸ್ತಾನದ ಬೌಲಿಂಗ್ ಶಕ್ತಿಯ ಮೇಲೆ ಗರ್ವದಿಂದ ಮೆರೆಯುತ್ತಿದ್ದ 180+ ಸ್ಕೋರ್ ದಾಖಲೆ ಧೂಳೀಪಟವಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !