May 16, 2026
Saturday, May 16, 2026
spot_img

ಈಡನ್ ಗಾರ್ಡನ್ಸ್ ನಲ್ಲಿ ಕೆಕೆಆರ್ ಸ್ಫೋಟಕ ಬ್ಯಾಟಿಂಗ್: ಗುಜರಾತ್ ಗೆಲುವಿಗೆ ಬಿಗ್ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು, ನಿಗದಿತ 20 ಓವರ್​​ಗಳಲ್ಲಿ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ, ಗುಜರಾತ್ ಗೆಲುವಿಗೆ 248 ರನ್​ಗಳ ಬಿಗ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಉತ್ತಮ ಆರಂಭವನ್ನು ನೀಡಿದರು. ಆದರೆ ರಹಾನೆ 14 ರನ್ ಗಳಿಸಿ ಔಟಾದರು.ಬಳಿಕ ಅಂಗ್‌ಕ್ರಿಶ್ ರಘುವಂಶಿ , ಅಲೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅಲೆನ್ ಕೇವಲ 35 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ 93 ರನ್ ಗಳಿಸಿ ಶತಕ ವಂಚಿತರಾದರು.

ಅಲೆನ್ ಬಳಿಕ ಬಂದ ಗ್ರೀನ್ ಕೂಡ ಅಂಗ್‌ಕ್ರಿಶ್ ಜೊತೆಗೆ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ಜೋಡಿ 52 ಎಸೆತಗಳಲ್ಲಿ 108 ರನ್​​ಗಳ ಜೊತೆಯಾಟವಾಡುವ ಮೂಲಕ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ರಘುವಂಶಿ 44 ಎಸೆತಗಳಲ್ಲಿ ಅಜೇಯ 82 ರನ್‌ಗಳ ಕೊಡುಗೆ ನೀಡಿದರು. ಕ್ಯಾಮರೂನ್ ಗ್ರೀನ್ ಕೂಡ 52 ರನ್ ಗಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !