2022ರಲ್ಲೇ ಕೆ.ಎಲ್​ ರಾಹುಲ್​- ಆಥಿಯಾ ಶೆಟ್ಟಿ ಮದುವೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಕೆ.ಎಲ್​ ರಾಹುಲ್​ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ನಡುವಿನ ಪ್ರೀತಿ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಷಯ.
ಹಲವು ಬಾರಿ ರಾಹುಲ್ ಸುನೀಲ್​ ಶೆಟ್ಟಿ ಕುಟುಂಬದೊಂದಿಗೆ ರಾಹುಲ್​​​​​​ ಕಾಣಿಸಿದ್ದರು. ಈ ವೇಳೆಯೇ ಇಬ್ಬರ ನಡುವಿನ ಲವ್ವಿ-ಡವ್ವಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಜೋಡಿ 2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಂತೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಕ್ಕಳಾಗಿರುವ ಆಥಿಯಾ ಮತ್ತು ಆಹಾನ್​ ಶೆಟ್ಟಿ ವಿವಾಹ ಮಾಡಲು ಕುಟುಂಬ ನಿರ್ಧರಿಸಿದ್ದು, ಹೀಗಾಗಿ ಈ ಎರಡು ಮದುವೆ ಸಮಾರಂಭ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಆಥಿಯಾ-ರಾಹುಲ್​​ ಸಂಬಂಧಕ್ಕೆ ಈಗಾಗಲೇ ಎರಡು ಕುಟುಂಬಗಳಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಇತ್ತ ಆಹಾನ್ ಕೂಡ ತಮ್ಮ ಬಹುಕಾಲದ ಗೆಳತಿ ತಾನಿಯಾ ಶ್ರಾಫ್​ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ಸುನೀಲ್ ಶೆಟ್ಟಿ ಮಗ ಆಹಾನ್​​ ನಟನೆ ಮಾಡಿರುವ ತಡಪ್​ ಚಿತ್ರದ ಸ್ಕ್ರೀನಿಂಗ್ ವೇಳೆ ಆಥಿಯಾ-ರಾಹುಲ್​​ ಜೋಡಿ ಸಾರ್ವಜನಿಕವಾಗಿ ಕಾಣಿಸಿತ್ತು.
ಇನ್ನು ಮತ್ತಷ್ಟು ಪುಷ್ಟಿ ನೀಡುವಂತೆ ಆಥಿಯಾ ಹುಟ್ಟುಹಬ್ಬದ ವೇಳೆ ‘ಹ್ಯಾಪಿ ಬರ್ತಡೇ ಮೈ ಲವ್​’ ಎಂದು ಪೋಸ್ಟ್​​ ಮಾಡಿದ್ದರು. ಇದೇ ರೀತಿ ಅನೇಕ ಬಾರಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!