Monday, March 27, 2023

Latest Posts

ಫಾರ್ಮ್‌ ಗೆ ಮರಳಿದ ಕೆ.ಎಲ್ ರಾಹುಲ್: ಪತ್ನಿ ಅಥಿಯಾ ಶೆಟ್ಟಿ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ರಾಹುಲ್ ವಿಶೇಷ ಕಾಣಿಕೆ ನೀಡಿದರು.
ಈ ಮೂಲಕ ತೆಮ ಇನಿದ್ಯ ಗೆಲುವು ಸಾಧಿಸಿರುವ ತ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಇದೀಗ ಪತಿ ರಾಹುಲ್ ಅವರ ಇನ್ನಿಂಗ್ಸ್ ನೋಡಿದ ಪತ್ನಿ ಅಥಿಯಾ ಶೆಟ್ಟಿ ತನ್ನ ಪತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಬಹಳ ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಅದೇ ವೇಳೆ ಉಪನಾಯಕತ್ವವನ್ನೂ ಅವರಿಂದ ಕಿತ್ತುಕೊಳ್ಳಲಾಯಿತು. ಬಳಿಕ ಅವರ ಫಾರ್ಮ್‌ ಬಗ್ಗೆ ಅವರು ನಿರಂತರವಾಗಿ ಟ್ರೋಲ್‌ಗೆ ಒಳಗಾಗಿದ್ದರು. ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಶುಕ್ರವಾರ ಅವರು ಆಡಿದ ಇನ್ನಿಂಗ್ಸ್‌, ಎಲ್ಲಾ ಟೀಕಕಾರರಿಗೆ ಉತ್ತರ ನೀಡಿದೆ.

ಇದೀಗ ಪತಿಯ ಅದ್ಭುತ ಇನ್ನಿಂಗ್ಸ್ ಬಗ್ಗೆ ಬರೆದುಕೊಂಡಿರುವ ಅಥಿಯಾ, ರಾಹುಲ್ ತಮ್ಮ ಅರ್ಧಶತಕದ ನಂತರ ಜಡೇಜಾ ಅವರೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ‘ಪ್ರತಿಯೊಂದು ಕಷ್ಟವನ್ನು ದಾಟಿ ಹಿಂತಿರುಗುವುದು ಹೇಗೆ ಎಂದು ತಿಳಿದಿರುವ ವ್ಯಕ್ತಿ’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!