ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಈ ಬಾರಿ ಸ್ಮೃತಿ ಇರಾನಿ ಎದುರು ರಾಹುಲ್ ಗಾಂಧಿಯ ಬದಲು ಗಾಂಧಿ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಕಿಶೋರಿ ಲಾಲ್ ಶರ್ಮ ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು . ಭಾರೀ ಮತಗಳ ಅಂತರದಲ್ಲಿ ಸ್ಮೃತಿ ಇರಾನಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಇದರ ಬೆನ್ನಲ್ಲಿಯೇ ಕಿಶೋರಿ ಲಾಲ್ ಶರ್ಮ ಶುಕ್ರವಾರ ದೆಹಲಿಗೆ ಆಗಮಿಸಿ ಗಾಂಧಿ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಪತ್ನಿಯನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪರಿಚಯ ಮಾಡಿಕೊಟ್ಟರು. ಇದರ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ರಾಹುಲ್ ಗಾಂದಿ ಅಮೇಥಿಯ ಭಾರೀ ಬಿಸಿಲಿನಲ್ಲಿ ಮಾಡಿದ ಪ್ರಚಾರದ ದಿನಗಳನ್ನು ನೆನಪಿಸಿಕೊಂಡ ಕಿಶೋರಿ ಲಾಲ್ ಶರ್ಮ, ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಬಟ್ಟೆ ಸಂಪೂರ್ಣ ಒದ್ದೆಯಾಗಿತ್ತು ಎಂದು ಹೇಳಿದ್ದಾರೆ. ಇನ್ನು ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ವಹಣೆ ಹೇಗಿದೆ ಎಂದು ಕೆಎಲ್ ಶರ್ಮ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಬಹಳ ಅದ್ಭುತವಾಗಿ ನಿರ್ವಹಣೆ ತೋರಿದಿದ್ದೇವೆ ಎಂದಿದ್ದಾರೆ.
ಕೆಎಲ್ ಶರ್ಮ ಅವರ ಪತ್ನಿ , ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ನೀವು ಸಿಂಹದಂತ ಮಗನಿಗೆ ಜನ್ಮ ನೀಡಿದ್ದೀರಿ ಎಂದು ಹೇಳಿದ್ದು, ಇದಕ್ಕೆ ಉತ್ತರ ನೀಡಿದ ಸೋನಿಯಾ ಗಾಂಧಿ, ನಾನು ಸಿಂಹಿಣಿ ಎಂದು ಹೇಳಿದ್ದಾರೆ. ಈ ವಿಡಿಯೋವಿಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವೀಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್, ಅಮೇಥಿ-ರಾಯ್ ಬರೇಲಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಈ ಸಂಬಂಧ ಸದಾ ಸೇವೆಯೊಂದಿಗೆ ಸಮರ್ಪಣಾಭಾವದಿಂದ ಕೂಡಿದೆ. ಕಿಶೋರಿ ಲಾಲ್ ಅವರು 40 ವರ್ಷಗಳಿಗೂ ಹೆಚ್ಚು ಕಾಲ ಅಮೇಥಿ ಜನರ ಸುಖ-ದುಃಖದಲ್ಲಿ ಅವರ ಜೊತೆ ನಿಂತಿದ್ದಾರೆ. ಈಗ ಜನರು ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಐತಿಹಾಸಿಕ ವಿಜಯದ ನಂತರ ಕಿಶೋರಿ ಜೀ ಅವರು ತಮ್ಮ ಕುಟುಂಬದೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದರು ಎಂದು ಬರೆದುಕೊಂಡಿದೆ.