KNOW IT | ಫ್ರಿಡ್ಜ್ ಇದೆಯಂತ ಬೇಕಾಬಿಟ್ಟಿ ವಸ್ತುಗಳನ್ನು ಇಡಬೇಡಿ, ಈ ವಸ್ತುಗಳಂತೂ ಇಡಲೇಬೇಡಿ!

ರೆಫ್ರಿಜರೇಟರ್ ಮಹಿಳೆಯರಿಗೆ ಪ್ರಿಯವಾಗಿದೆ. ಎಲ್ಲಾ ಆಹಾರವನ್ನು ರಕ್ಷಿಸಲು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಕೆಲವು ಆಹಾರಗಳನ್ನು ರೆಫ್ರಿಜರೇಟರ್ ನಲ್ಲಿಟ್ಟರೆ ಕೆಡುತ್ತವೆ. ಇದು ಕೆಲವರಿಗೆ ಗೊತ್ತು, ಕೆಲವರಿಗೆ ಗೊತ್ತಿಲ್ಲ. ಆದ್ದರಿಂದ, ಯಾವ ಆಹಾರಗಳನ್ನು ರೆಫ್ರಿಜರೇಟರ್ನಲ್ಲಿ ಇಡಬಾರದು ಎಂಬುದನ್ನು ತಿಳಿಯಿರಿ.

ರೆಫ್ರಿಜರೇಟರ್ ನಲ್ಲಿ ಕಾಫಿ ಪೌಡರ್ ಇಡಬೇಡಿ ಇದು ಪರಿಮಳವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ, ರೆಫ್ರಿಜರೇಟರ್ ಹೊರಗೆ ಗಾಳಿಯಾಡದ ಬಾಕ್ಸ್ ನಲ್ಲಿ ಶೇಖರಿಸಿಡಲು ಸೂಚಿಸಲಾಗುತ್ತದೆ.

ಎಣ್ಣೆಯನ್ನು ಫ್ರಿಜ್ ನಲ್ಲಿ ಇಡಲೇಬಾರದು. ಕೆಲ ಸಮಯದ ನಂತ್ರ ಬೆಣ್ಣೆಯಂತಾಗಿಬಿಡುತ್ತದೆ. ತೆಂಗಿನ ಎಣ್ಣೆ, ಆಲಿವ್ ಆಯಿಲನ್ನು ಹೊರಗೆ ಇಡುವುದು ಒಳ್ಳೆಯದು. ಒಂದು ವೇಳೆ ಇವುಗಳನ್ನು ಫ್ರಿಜ್ ನಲ್ಲಿಟ್ಟರೆ ಹೊರೆಗೆ ತೆಗೆದ ತಕ್ಷಣ ಬಳಸಲು ಬರುವುದಿಲ್ಲ.

ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬೇಡಿ. ರೆಫ್ರಿಜರೇಟರ್ನಲ್ಲಿ ಈರುಳ್ಳಿ ಬೇಗನೆ ಕೊಳೆಯುತ್ತದೆ. ಅಹಿತಕರ ವಾಸನೆಯು ರೆಫ್ರಿಜರೇಟರ್ನಲ್ಲಿರುವ ಇತರ ಆಹಾರಗಳ ಮೇಲೂ ಪರಿಣಾಮ ಬೀರುತ್ತದೆ.

ಆಲೂಗಡ್ಡೆಯನ್ನು ಸಹ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಾರದು. ರೆಫ್ರಿಜರೇಟರ್ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸಬೇಡಿ. ಟೊಮೆಟೊಗಳು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!