ಪಿತೃಪಕ್ಷದ ಕೊನೆಯ ದಿನ, ಮಹಾಲಯ ಅಮಾವಾಸ್ಯೆಯ ಬಗೆಗಿನ ಈ ವಿಷಯಗಳ ಬಗ್ಗೆ ತಿಳಿದಿರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಚಾಂಗದ ಪ್ರಕಾರ ಅಶ್ವಿನಿ ಮಾಸದ ಅಮಾವಾಸ್ಯೆ ತಿಥಿಯನ್ನು ಸರ್ವ ಪಿತೃ ಅಮಾವಾಸ್ಯೆ ಎನ್ನುತ್ತಾರೆ. ಇದನ್ನು ಮಹಾಲಯ ಅಮಾವಾಸ್ಯೆ ಎಂದೂ ಸಹ ಕರೆಯುತ್ತಾರೆ. ಈ ವರ್ಷ, ಸರ್ವ ಪಿತೃ ಅಮಾವಾಸ್ಯೆಯನ್ನು ಇಂದು ಆಚರಿಸಲಾಗುತ್ತದೆ.

ಈ ದಿನ ಶ್ರಾದ್ಧದ ಜೊತೆಗೆ ಪಿಂಡಗಳನ್ನು ಪೂರ್ವಜರಿಗೆ ಅರ್ಪಿಸಲಾಗುತ್ತದೆ. ಈ ದಿನದಂದು ಕುಟುಂಬದ ಎಲ್ಲಾ ಪೂರ್ವಜರು ಒಟ್ಟಾಗಿ ಶ್ರಾದ್ಧವನ್ನು ಮಾಡುತ್ತಾರೆ. ಇದರ ಮೂಲಕ ನೀವು ಹಿರಿಯರ ಆಶೀರ್ವಾದವನ್ನು ಪಡೆಯಬಹುದು.

ಇದರ ಬಗ್ಗೆ ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ..

ಮಹಾಲಯ ಅಮಾವಾಸ್ಯೆಯಂದು, ಪೂರ್ವಜರನ್ನು ಗೌರವಿಸಲು ವಿಶೇಷ ಕಾರ್ಯಗಳನ್ನ ಮಾಡಬೇಕಾಗುತ್ತದೆ. ಇನ್ನು ಈ ದಿನ ತಪ್ಪದೇ ನೀರು, ಎಳ್ಳು ಬೀಜಗಳು ಮತ್ತು ಬಾರ್ಲಿಯನ್ನು ಅರ್ಪಿಸುವ ತರ್ಪಣವನ್ನು ಮಾಡಬೇಕು. ಪೂರ್ವಜರಿಗೆ ನೋವುಂಟು ಮಾಡುವ ಸನ್ನಿವೇಶಗಳು ನಿಮ್ಮ ಬದುಕಿನಲ್ಲಿ ಎದುರಾಗಿದ್ದರೆ ಇಂದು ಕ್ಷಮೆ ಕೇಳಿ.

ಅಗಲಿದ ಆತ್ಮಗಳಿಗೆ ಶಾಂತಿ ಸಿಗಲು ಮಹಾಲಯ ಅಮಾವಾಸ್ಯೆ ಸೇರಿದಂತೆ ಪಿತೃ ಪಕ್ಷ ಅವಧಿಯಲ್ಲಿ ಪಿಂಡವನ್ನು ಅರ್ಪಿಸಿ. ಈ ಕ್ರಿಯೆಯು ಪೂರ್ವಜರ ಆಧ್ಯಾತ್ಮಿಕ ಪ್ರಯಾಣದಲ್ಲಿ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ.

ಈ ದಿನ ಪೂರ್ವಜರಿಗೆ ಮೀಸಲಾದ ವಿಶೇಷ ವಿಧಿಗಳನ್ನು ಮತ್ತು ಆಚರಣೆಗಳನ್ನು ಮಾಡಲು ಪವಿತ್ರ ನದಿ ಇರುವ ಸ್ಥಳ, ದೇವಾಲಯಗಳು ಅಥವಾ ತೀರ್ಥಯಾತ್ರೆಯ ಸ್ಥಳಗಳಿಗೆ ಹೋದರೆ ಉತ್ತಮ.

ಅಗತ್ಯವಿರುವವರಿಗೆ ಆಹಾರ ನೀಡುವುದು, ಬಟ್ಟೆಗಳನ್ನು ನೀಡುವುದು ಅಥವಾ ಹಣಕಾಸಿನ ನೆರವು ನೀಡುವುದು ಸೇರಿದಂತೆ ದಾನ ಕಾರ್ಯಗಳನ್ನ ಮಾಡಬೇಕು. ಈ ಕಾರ್ಯಗಳನ್ನು ಅಗಲಿದ ಆತ್ಮಗಳಿಗೆ ಅರ್ಪಣೆ ಎಂದು ಪರಿಗಣಿಸಲಾಗುತ್ತದೆ.

ಮಹಾಲಯ ಅಮವಾಸ್ಯೆಯಂದು ಯಾರೂ ಬರಿಗೈಯಲ್ಲಿ ಮನೆಯಿಂದ ಹೊರಗೆ ಹೋಗಲು ಬಿಡಬಾರದು. ನಿಮ್ಮ ಮನೆಗೆ ಯಾರೇ ಬಂದರೂ ಸಹ ಅವರಿಗೆ ಸಹ ಏನಾದರೂ ಕೊಟ್ಟು ಕಳಿಸುವುದು ಬಹಳ ಮುಖ್ಯ. ಎಷ್ಟೇ ಬಡವರಾಗಿದ್ದರೂ ಸಹ ನೀವು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವನಿಗೆ ಏನಾದರೂ ಕೊಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಹಾಗೂ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!