ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
1 ಕಪ್ ಅಕ್ಕಿ ಹಿಟ್ಟು
1/2 ಕಪ್ ತುರಿದ ಹಸಿ ತೆಂಗಿನಕಾಯಿ
1/2 ಇಂಚಿನ ಶುಂಠಿ
1 ಟೀಸ್ಪೂನ್ ಜೀರಿಗೆ
4 ಹಸಿರು ಮೆಣಸಿನಕಾಯಿ
ಉಪ್ಪು, ನೀರು, ಎಣ್ಣೆ
ಮಾಡುವ ವಿಧಾನ:
ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ಹಾಕಿ ಅರ್ಧಂಬರ್ಧ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರಿಟ್ಟು ಕುದಿಸಿ, ಒಂದು ಬಟ್ಟಲಿಗೆ ಅಕ್ಕಿಹಿಟ್ಟು, ಕೊಬ್ಬರಿ, ಉಪ್ಪು, ಮಿಕ್ಸಿ ಮಾಡಿದ ಮಿಶ್ರಣ ಹಾಕಿ ಒಮ್ಮೆ ಕಲಸಿ. ನಂತರ ಬಿಸಿ ನೀರು ಹಾಕುತ್ತಾ ಮೆತ್ತಗೆ ಪೂರಿ ಹಿಟ್ಟಿನ ಹದಕ್ಕೆ ಒತ್ತಿಕೊಳ್ಳಿ. ಒಂದು ಪೇಪರ್, ಬಾಳೆಎಲೆ ತೆಗೆದುಕೊಂಡು ಎಣ್ಣೆ ಸವರಿ, ಅದರ ಮೇಲೆ ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ನಿಪ್ಪಟ್ಟಿನ ಆಕಾರಕ್ಕೆ ಒತ್ತಿಕೊಂಡು ಕಾದ ಎಣ್ಣೆಯೊಳಗೆ ಹಾಕಿ ಕರಿದರೆ ಕೊಬ್ಬರಿ ನಿಪ್ಪಟ್ಟು ಸಿದ್ದ.