August 26, 2026
Wednesday, August 26, 2026
spot_img

ಎಐ ಮ್ಯಾಜಿಕ್‌ನೊಂದಿಗೆ ಮತ್ತೆ ಬರಲಿದೆ ‘ಕೊಚಾಡಿಯನ್’: ರಜನಿಕಾಂತ್ ಸಿನಿಮಾಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 2014ರಲ್ಲಿ ಬಿಡುಗಡೆಯಾದ ‘ಕೊಚಾಡಿಯನ್’ ಚಿತ್ರದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸುಧಾರಿಸಲಾದ ಹೊಸ ಆವೃತ್ತಿಯ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರದ ಮರುಬಿಡುಗಡೆಯನ್ನು ತಡೆಹಿಡಿಯುವಂತೆ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಹಣಕಾಸು ವಿವಾದದಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಸಂಸ್ಥೆ

ಚಿತ್ರ ನಿರ್ಮಾಣಕ್ಕೆ 2014ರಲ್ಲಿ ಸುಮಾರು 10 ಕೋಟಿ ಹಣಕಾಸು ನೆರವು ನೀಡಿದ್ದ ಸಂಸ್ಥೆಯೊಂದು, ನಿರ್ಮಾಪಕರು ಒಪ್ಪಂದದಂತೆ ಹಣ ಮರುಪಾವತಿಸಿಲ್ಲ ಎಂದು ಆರೋಪಿಸಿ ಈಗಾಗಲೇ ಹಣ ವಸೂಲಾತಿ ಸಂಬಂಧ ಪ್ರತ್ಯೇಕ ದಾವೆ ದಾಖಲಿಸಿದೆ. ನಿರ್ಮಾಪಕರು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಸಂಬಂಧಿತ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಇದನ್ನೂ ಓದಿ:

‘ಚಿತ್ರ ಹಕ್ಕು ಪಡೆದ ಸಂಸ್ಥೆಯ ವಿರುದ್ಧ ಬೇಡಿಕೆ ಇಲ್ಲ’

ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಸ್ತುತ ಚಿತ್ರದ ಹಕ್ಕು ಹೊಂದಿರುವ ಸಂಸ್ಥೆಯ ವಿರುದ್ಧ ಅರ್ಜಿದಾರರು ಯಾವುದೇ ನಿರ್ದಿಷ್ಟ ಪರಿಹಾರವನ್ನು ಕೋರಿಲ್ಲ ಎಂದು ಗಮನಿಸಿದೆ. ಹೀಗಾಗಿ ಆ ಸಂಸ್ಥೆ ಅಥವಾ ಅದರ ಮೂಲಕ ಚಿತ್ರದ ಮರುಬಿಡುಗಡೆಯನ್ನು ತಡೆಯಲು ಕಾನೂನಾತ್ಮಕ ಆಧಾರ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹಣ ವಸೂಲಾತಿ ದಾವೆ ಮುಂದುವರಿಕೆ

ಚಿತ್ರದ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಹಣ ವಸೂಲಾತಿ ಸಂಬಂಧ ದಾಖಲಿಸಿರುವ ಮೂಲ ಸಿವಿಲ್ ದಾವೆ ಮಾತ್ರ ಮುಂದುವರಿಯಲಿದೆ ಎಂದು ತಿಳಿಸಿದೆ. ಇದರೊಂದಿಗೆ AI ತಂತ್ರಜ್ಞಾನದಿಂದ ಸುಧಾರಿಸಲಾದ ‘ಕೊಚಾಡಿಯನ್’ ಚಿತ್ರದ ಮರುಬಿಡುಗಡೆಗೆ ಇದ್ದ ಕಾನೂನು ಅಡ್ಡಿ ನಿವಾರಣೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !