ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡಿನ ಅಜ್ಜ-ಅಜ್ಜಿ ಮನೆಗೆ ಹೋಗಿದ್ದ ವೇಳೆ ಭೂ ಕುಸಿತದಲ್ಲಿ ಮೃತಪಟ್ಟ ವಿರಾಜಪೇಟೆ ತಾಲೂಕಿನ ಗುಹೆಯಾ ಗ್ರಾಮದ 4ನೇ ತರಗತಿ ವಿದ್ಯಾರ್ಥಿ ರೋಹಿತ್ ತಾಯಿಗೆ ಸಿಎಂ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ.
ರೋಹಿತ್ ತಾಯಿ ಕವಿತಾ ಜತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರು ದುರಂತಕ್ಕೆ ಸಾಂತ್ವನ ಹೇಳಿ ಪರಿಹಾರ ಕೊಡುವ ಭರವಸೆ ನೀಡಿದರು.
ಇದಕ್ಕೂ ಮೊದಲು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಕುಟ್ಟದ ಗುಡ್ಡ ಕುಸಿತ ಪ್ರದೇಶಕ್ಕೆ ಸಿಎಂ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರ ಜೊತೆ ಕೆಲಹೊತ್ತು ಚರ್ಚೆ ಮಾಡಿದ ಬಳಿಕ 20 ಕುಟುಂಬಗಳ ಸಂಕಷ್ಟ ಕೇಳಿ ಸಿಎಂ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.