ಕೊಡಗು: ಭಾನುವಾರ ರಾತ್ರಿಯಿಂದ ಭಾರಿ ಮಳೆ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಡೀ ಮಳೆಯಾಗಿದ್ದು, ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 15.21 ಮಿ.ಮೀ. ಮಳೆ ದಾಖಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 20.90 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 8.43 ಮಿ.ಮೀ.ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 16.30 ಮಿ.ಮೀ.ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 11.50, ನಾಪೋಕ್ಲು 43.40, ಸಂಪಾಜೆ 12.50, ಭಾಗಮಂಡಲ 16.20, ವೀರಾಜಪೇಟೆ ಕಸಬಾ 9.20, ಹುದಿಕೇರಿ 12.70, ಶ್ರೀಮಂಗಲ 7, ಪೊನ್ನಂಪೇಟೆ 15, ಅಮ್ಮತ್ತಿ 6, ಬಾಳೆಲೆ 0.70, ಸೋಮವಾರಪೇಟೆ ಕಸಬಾ 14.60, ಶನಿವಾರಸಂತೆ 23.20, ಶಾಂತಳ್ಳಿ 14, ಕೊಡ್ಲಿಪೇಟೆ 13, ಕುಶಾಲನಗರ 22, ಸುಂಟಿಕೊಪ್ಪ 11 ಮಿ.ಮೀ. ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ಸರಾಸರಿ 3209.78 ಮಿ.ಮೀ. ಮಳೆಯಾದಂತಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2560.24 ಮಿ.ಮೀ ಮಳೆಯಾಗಿತ್ತು.

ಹಾರಂಗಿ ನೀರಿನ ಮಟ್ಟ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದಲ್ಲಿ 2853.03 ಅಡಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ 2858.13 ಅಡಿಗಳಷ್ಟಿತ್ತು.
ಪ್ರಸಕ್ತ ಜಲಾಶಯಕ್ಕೆ‌ 934 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ಒಳ ಹರಿವು 852 ಕ್ಯುಸೆಕ್’ನಷ್ಟಿತ್ತು.
ಪ್ರಸಕ್ತ ಜಲಾಶಯದಿಂದ ನದಿಗೆ 600 ಕ್ಯುಸೆಕ್ ಹಾಗೂ ನಾಲೆಗೆ 1200 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದ್ದು,. ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಹೊರ ಹರಿವು ನದಿಗೆ 700 ಕ್ಯುಸೆಕ್ ಹಾಗೂ ನಾಲೆಗೆ 550 ಕ್ಯುಸೆಕ್’ನಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!