ಕೊಡಗು ಪೊಲೀಸರು ವಶಪಡಿಸಿಕೊಂಡಿದ್ದ 28 ಕೆ.ಜಿ.ಮಾದಕ ವಸ್ತು ನಾಶ

ಹೊಸದಿಗಂತ ವರದಿ ಮಡಿಕೇರಿ:

ಕಳೆದ 9 ತಿಂಗಳ‌ ಅವಧಿಯಲ್ಲಿ ಕೊಡಗು ಜಿಲ್ಲೆಯ ಪೊಲೀಸರು ಒಟ್ಟು 26.750 ಕೆ.ಜಿ.ಗಾಂಜಾ ಹಾಗೂ 1.161 ಕೆ.ಜಿ ಹಶಿಸ್ ಆಯಿಲ್ ವಶಪಡಿಸಿಕೊಂಡಿದ್ದು, ಇವುಗಳನ್ನು ಶುಕ್ರವಾರ ಮೈಸೂರಿನ ಗುಜ್ಜೆಗೌಡನಪುರದ ಕುಲುಮೆಯಲ್ಲಿ ನಾಶಪಡಿಸಲಾಯಿತು.

ಕೊಡಗು ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಳೆದ ವರ್ಷದ ಜೂ.4ರಿಂದ ಪ್ರಸಕ್ತ ಸಾಲಿನ ಮಾ.3ವರೆಗೆ ಒಟ್ಟು 22 ಪ್ರಕರಣಗಳಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತಿದ್ದ 60 ಆರೋಪಿಗಳನ್ನು ದಸ್ತಗಿರಿ ಮಾಡಿ ಒಟ್ಟು 26.750 ಕೆ.ಜಿ ಗಾಂಜಾ ಹಾಗೂ 1.161 ಕೆ.ಜಿ. ಹಶಿಶ್ ಆಯಿಲ್‌ಗಳನ್ನು ವಶಪಡಿಸಿಕೊಂಡಿದ್ದರು.

ಕೊಡಗು ಜಿಲ್ಲಾ ಪೊಲೀಸರು ಯಶಗುಜ್ಜೆಗೌಡನಪುರದಲ್ಲಿರುವ ಜಿಪ್ಸ್ ಬಯೋಟೆಕ್’ಗೆ ಸೇರಿದ ಕುಲುಮೆಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನೀರಿಕ್ಷಕರು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡ್ರಗ್ಸ್ ಡಿಸ್ಪೋಸಲ್ ಸಮಿತಿ ಸದಸ್ಯರ ಸಮ್ಮುಖದಲ್ಲಿ ನಾಶಪಡಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!