ಕೊಡಗು: ಬಿಗಿ ಭದ್ರತೆಯ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ

ಹೊಸದಿಗಂತ ವರದಿ ಮಡಿಕೇರಿ
ಪೂರ್ವ ನಿಗದಿಯಂತೆ ಸೋಮವಾರದಿಂದ ಎಸ್.ಎಸ್.ಎಲ್.ಸಿ‌. ಪರೀಕ್ಷೆ ಆರಂಭವಾಗಿದ್ದು, ಬಿಗಿ ಭದ್ರತೆಯ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯ ಮಡಿಕೇರಿ ತಾಲೂಕಿನ 13, ಸೋಮವಾರಪೇಟೆ ತಾಲೂಕಿನ 16 ಹಾಗೂ ವೀರಾಜಪೇಟೆ ತಾಲೂಕಿನ 8 ಸೇರಿದಂತೆ ಒಟ್ಟು 37 ಕೇಂದ್ರಗಳಲ್ಲಿ 3306 ವಿದ್ಯಾರ್ಥಿಗಳು ಹಾಗೂ 3416 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 6722 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.
ಹಿಜಾಬ್ ವಿವಾದದ ಕುರಿತು ಹೈಕೋರ್ಟ್‌ ತೀರ್ಪಿನನ್ವಯ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸದೆ ಸಮವಸ್ತ್ರ ಧರಿಸಿಬಂದು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!