ಹೊಸದಿಗಂತ ವರದಿ ಕುಶಾಲನಗರ:
ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಶಿರಂಗಾಲ ಗ್ರಾಮದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೊಣನೂರಿನಲ್ಲಿ ನಡೆದಿದೆ.
ಶಿರಂಗಾಲದ ಮಂಜುನಾಥ್ ಎಂಬವರ ದ್ವಿತೀಯ ಪುತ್ರ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಡ್ರೈವರ್ ಆಗಿದ್ದ ರಂಜಿತ್ (25) ಮೃತ ದುರ್ದೈವಿ.
ಮೃತ ರಂಜಿತ್ ಒಂದು ವಾರದ ರಜೆಯಲ್ಲಿ ಶಿರಂಗಾಲದ ಗ್ರಾಮಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಶಿರಂಗಾಲದಿಂದ ಕೊಣನೂರಿಗೆ ಹೋಗುವಾಗ ರಂಜಿತ್ ಚಲಿಸುತ್ತಿದ್ದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.