ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಜೊತೆಗೆ ರಾಜ್ಯದ ಬರಗಾಲ ಛಾಯೆ, ಮಳೆಗಾಲ, ಬಿಜೆಪಿ-ಜೆಡಿಎಸ್ ಮೈತ್ರಿ, ಸನಾತನ ಧರ್ಮದ ಬಗ್ಗೆ ಸ್ಟ್ಯಾಲಿನ್ ಅವರ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸ್ವಪಕ್ಷೀಯರಿಂದಲೇ ಕಚ್ಚಾಟದ ಬಗ್ಗೆ ಮಾತನಾಡಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ. ಯುಗಾದಿ ನಂತರ ಏನಾಗುತ್ತೋ ಕಾದುನೋಡಿ. ಯುಗಾದಿವರೆಗೂ ಸಮಯ ಇದೆ. ಎಲ್ಲವೂ ಕಾದು ನೋಡಬೇಕಾಗಿದೆ’ ಎಂದು ಸ್ವಾಮೀಜಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರುಅವರವರ ವಿಚಾರ ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ. ರಾಜಕೀಯ ವ್ಯವಸ್ಥೆಯಲ್ಲಿ ಅಸ್ತಿರತೆ ಉಂಟಾಗಲಿದೆ. ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯದಲ್ಲೂ ಅಸ್ಥಿರತೆ ಕಾಡಲಿದೆ ಎಂದು ಪುನರುಚ್ಛರಿಸಿದರು.
ಅದೇ ರೀತಿ ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರವಾಗಿ ಮಾತನಾಡಿದ ಅವರು, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯ ಮಾಡಿದ ಪಾಪಕರ್ಮಗಳು ಮನುಷ್ಯನನ್ನ ಕ್ಷಮಿಸುವುದಿಲ್ಲ. ಮನುಷ್ಯನ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಮನುಷ್ಯನ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿ ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸ್ಟಾಲಿನ್ ಹೇಳಿಕೆ ವಿಚಾರವಾಗಿ ತಿಳಿಸಿದ ಅವರು, ಇದು ಅವರವರ ಧರ್ಮದವರ ಹೇಳಿಕೆ ಅದು ಅವರನೋವಿನ ಸಂಗತಿ. ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತದೆ. ಅದನ್ನು ಈ ರೀತಿ ನೋವಿನ ಮೂಲಕ ಹೊರಹಾಕುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಉದಯನಿಧಿ ಸ್ಟಾಲಿನ್ ಅವರಿಗೆ ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರೋರು ತಮಗಾಗಿರೋ ನೋವಿನಿಂದಾಗಿ ಈ ರೀತಿಹೇಳಿಕೆ ನೀಡುತ್ತಾರೆ. ಜನರಲ್ಲಿ ಪೂರ್ಣವಾದ ಜ್ಞಾನದ ಕೊರತೆ ಇದೆ. ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ ಎಂದರೆ ನೆಮ್ಮದಿ,ಶಾಂತಿ ನಿಜವಾದ ಜ್ಞಾನ ಮೂಡಿಸುತ್ತೆ. ಆದರೆ, ಅದರಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳದವರಿಂದ ಈ ರೀತಿ ಅಸಮಾಧಾನ ಮೂಡುತ್ತೆ ಎಂದು ಹೇಳಿದರು.