ರಾಷ್ಟ್ರಗೀತೆ ಹಾಡುವ ವೇಳೆ ಚೂಯಿಂಗ್ ಗಮ್ ಜಗಿಯುತ್ತಾ ನಿಂತ ಕೊಹ್ಲಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಪಂದ್ಯದಲ್ಲಿ ರಾಷ್ಟ್ರಗೀತೆಗೆ ಗೌರವ ಕೊಡುವ ವೇಳೆ ವಿರಾಟ್ ಕೊಹ್ಲಿ ನಡೆದುಕೊಂಡಿರುವ ರೀತಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತ್ತು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವ ನೀಡುತ್ತಾರೆ.
ಈ ವೇಳೆ ವಿರಾಟ್ ಕೊಹ್ಲಿ ಸರಿಯಾಗಿ ನಿಲ್ಲದೆ, ಬಾಯಿಯಲ್ಲಿ ಚೂಯಿಂಗ್ ಗಮ್ ಹಾಕಿಕೊಂಡು ಜಗಿಯುತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇದು ರಾಷ್ಟ್ರಗೀತೆಗೆ ತೋರಿದ ಅಗೌರವವಾಗಿದೆ ಎಂದು ನೆಟ್ಟಿಗರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!