ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಮಾಜಿ ಕ್ಯಾಪ್ಟನ್ ವಿರಾಟ್ ಪಾಲಿಗೆ ಅತಿ ಮುಖ್ಯ ಪಂದ್ಯವಾಗಿದೆ. ವಿರಾಟ್‌ಗೆ ಇದು 100ನೇ ಟೆಸ್ಟ್ ಮ್ಯಾಚ್ ಆಗಿದ್ದು, ಕೋಚ್ ರಾಹುಲ್ ದ್ರಾವಿಡ್‌ರಿಂದ ಟೆಸ್ಟ್ ಕ್ಯಾಪ್ ಪಡೆದಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ಕೋಚ್ ದ್ರಾವಿಡ್ ನೂರನೇ ಟೆಸ್ಟ್‌ನ ವಿಶೇಷ ಕ್ಯಾಪ್ ನೀಡಿ ಗೌರವಿಸಿದ್ದಾರೆ.
ಪತ್ನಿ ಅನುಷ್ಕಾ ಕೂಡ ಈ ಸಂದರ್ಭದಲ್ಲಿ ನಿಂತು ವಿರಾಟ್‌ಗೆ ಸಾಥ್ ನೀಡಿದ್ದಾರೆ. ನನ್ನ ಬಾಲ್ಯದ ಹೀರೋಗಳಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿದ್ದು, ಖುಷಿ ವಿಷಯ. ಇದೆಲ್ಲಾ ನನ್ನ ಜೀವನದ ವಿಶೇಷ ಕ್ಷಣ, ಪತ್ನಿ ಜೊತೆಗಿದ್ದಾರೆ, ತಮ್ಮ ಸ್ಟ್ಯಾಂಡ್‌ನಲ್ಲಿದ್ದಾರೆ. ಎಲ್ಲರ ಸಹಕಾರದಿಂದ ನಾನು ಈ ಮೈಲಿಗಲ್ಲು ದಾಟಿದ್ದೇನೆ. ಬಿಸಿಸಿಐಗೂ ಧನ್ಯವಾದಗಳು ಎಂದು ಕೊಹ್ಲಿ ಹೇಳಿದ್ದಾರೆ.
ಈ ಕ್ಯಾಪ್ ಪಡೆಯುವ ಎಲ್ಲ ಅರ್ಹತೆ ನಿಮಗಿದೆ, ಅರ್ಹತೆಯಿಂದಲೇ ಇದನ್ನು ಸಂಪಾದಿಸಿದ್ದೀರಿ. ಈ ಸಂಭ್ರಮವನ್ನು ಇನ್ನಷ್ಟು ದ್ವಿಗುಣಗೊಳಿಸೋಣ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ.