ಕೊಹ್ಲಿ ಸೆಂಚುರಿ ಆಟ: ರಾಜಸ್ಥಾನಕ್ಕೆ 184 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲಸಿಸ್ ಹೋರಾಟದಿಂದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿದೆ. ವಿರಾಟ್ ಕೊಹ್ಲಿ ಸ್ಫೋಟಕ ಸೆಂಚುರಿ ಆರ್‌ಸಿಬಿಯ ಬೃಹತ್ ಮೊತ್ತಕ್ಕೆ ನೆರವಾಯಿತು.

ಸ್ಫೋಟಕ ಬ್ಯಾಟಿಂಗ್ ಮೂಲಕ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್‌ಗೆ ಶಾಕ್ ನೀಡಿದರು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲಿಸ್ ಮೊದಲ ವಿಕೆಟ್‌ಗೆ 125 ರನ್ ಜೊತೆಯಾಟ ನೀಡಿದರು. ಇದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ದಾಖಲಾದ ಆರಂಭಿಕರ ಎರಡನೇ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡುಪ್ಲೆಸಿಸ್ ವಿಕೆಟ್ ಪತನದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಕಣಕ್ಕಳಿದು ನಿರಾಸೆ ಮೂಡಿಸಿದರು. ಮ್ಯಾಕ್ಸ್‌ವೆಲ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಕೊಹ್ಲಿ ಹೋರಾಟ ಮುಂದುವರಿದಿರೆ, ಮತ್ತೊಂದೆಡೆಯಿಂದ ವಿಕೆಟ್ ಪತನಗೊಂಡಿತು. ಸೌರವ್ ಚವ್ಹಾಣ್ 9 ರನ್ ಸಿಡಿಸಿ ಔಟಾದರು. ಇತ್ತ ಅಬ್ಬರಿಸಿದ ವಿರಾಟ್ ಕೊಹ್ಲಿ ಶತಕ ಸಿಡಿಸಿದರು. ಈ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಕೊಹ್ಲಿ ಪಾಲಾಯಿತು. ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 8ನೇ ಶತಕ ದಾಖಲಿಸಿದರು.

ಆದರೆ 19ನೇ ಓವರ್‌ನಲ್ಲಿ ಆರ್‌ಸಿಬಿ ಕೇವಲ 4 ರನ್ ಮಾತ್ರ ಗಳಿಸಿತು. ಅಂತಿಮ ಓವರ್‌ನಲ್ಲಿ ಕೊಹ್ಲಿ ಸಿಡಿಸಿದ 3 ಬೌಂಡರಿಯಿಂದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!