Wednesday, September 28, 2022

Latest Posts

ಕೊಹ್ಲಿ ಅರ್ಧ ಶತಕ: ಪಾಕ್ ಗೆ 182 ರನ್ ಗುರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಇನ್ನಿಂಗ್ಸ್‌ನಲ್ಲಿ ದಾಖಲಾದ ಏಕೈಕ ಅರ್ಧಶತಕ ಬಾರಿಸಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ. ಅವರ ಈ ಸಾಹಸದಿಂದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.
ಭಾನುವಾರ ನಡೆದ ಏಷ್ಯಾ ಕಪ್ ಟಿ 20 ಕ್ರಿಕೆಟ್ ಟೂರ್ನಿಯ ಸೂಪರ್ 4ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಏಳು ವಿಕೆಟಿಗೆ 181 ರನ್ ಗಳಿಸಿದೆ. ಕೊಹ್ಲಿ ರನೌಟ್ ಆಗುವ ಮೊದಲು 44 ಬಾಲ್‌ಗಳಲ್ಲಿ 60 ರನ್ ಗಳಿಸಿದರು. ಮೊದಲ ವಿಕೆಟಿಗೆ 54 ರನ್ ಸೇರಿದಾಗ ನಾಯಕ ರೋಹಿತ್ ಔಟಾದರು. ಬಿರುಸಿನ ಆರಂಭ ಪಡೆದಿದ್ದ ನಾಯಕ ಗಳಿಸಿದ್ದು 28 ರನ್. ರಾಹುಲ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 20 ಬಾಲ್ ಎದುರಿಸಿದ ಅವರು 28 ರನ್ ಗೆ ಆಟ ಮುಗಿಸಿದರು.
ಸೂರ್ಯಕುಮಾರ್, ಪಂತ್, ಹೂಡಾ ದೊಡ್ಡ ಮೊತ್ತ ಸೇರಿಸುವಲ್ಲಿ ವಿಫಲರಾದರೆ, ಹಾರ್ದಿಕ್ ಪಾಂಡ್ಯ ಖಾತೆಯನ್ನೇ ತೆರೆಯಲಿಲ್ಲ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!