ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಚಾರ್ಜ್ ಶೀಟ್‌ನಲ್ಲಿದೆ ರಾಯ್ ಡಿಎನ್‌ಎ ಸಹಿತ 11 ಸಾಕ್ಷ್ಯಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಕೊಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆಯ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸಂಜಯ್ ರಾಯ್, ಪ್ರಕರಣದ ‘ಏಕೈಕ ಆರೋಪಿ’ ಎಂದು ಸಿಬಿಐ ಹೇಳಿದೆ .

ತನ್ನ ಚಾರ್ಜ್ ಶೀಟ್‌ನಲ್ಲಿ ಡಿಎನ್‌ಎ ಮತ್ತು ರಕ್ತದ ಮಾದರಿಗಳ ವರದಿಗಳಂತಹ 11 ಸಾಕ್ಷ್ಯಗಳನ್ನು ಪಟ್ಟಿ ಮಾಡಿದೆ.

ಸಂತ್ರಸ್ತೆಯ ದೇಹದಲ್ಲಿ ಆತನ ಡಿಎನ್‌ಎ ಇರುವಿಕೆ, ಚಿಕ್ಕ ಕೂದಲು, ಸಂತ್ರಸ್ತೆಯ ರಕ್ತದ ಕಲೆಗಳು, ದೇಹದ ಮೇಲಿನ ಗಾಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅವರ ಮೊಬೈಲ್ ಫೋನ್ ಕರೆ ವಿವರಗಳ ದಾಖಲೆಗಳನ್ನು ಸಿಬಿಐ ಸಾಕ್ಷ್ಯವಾಗಿ ಉಲ್ಲೇಖಿಸಿದೆ.

ಸಂತ್ರಸ್ಥೆಯ ಪ್ರತಿರೋಧ/ಹೋರಾಟದ ವೇಳೆ ರಾಯ್ ಗೆ ಗಾಯಳಾಗಿರುವ ಗುರುತುಗಳಿವೆ ಎಂದು ಚಾರ್ಜ್ ಶೀಟ್ ಉಲ್ಲೇಖಮಾಡಿದೆ.

ಆಗಸ್ಟ್ 8 ಮತ್ತು 9 ರ ಮಧ್ಯರಾತ್ರಿಯ ಸಮಯದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಯ್ ಇರುವ ಬಗ್ಗೆ ಮತ್ತು ತುರ್ತು ಕಟ್ಟಡದ ಮೂರನೇ ಮಹಡಿಯಲ್ಲಿ SoC (ಅಪರಾಧದ ದೃಶ್ಯ) ಇರುವುದು ಸಿಸಿಟಿವಿ ದೃಶ್ಯಗಳ ಮೂಲಕ ಸಾಬೀತಾಗಿದೆ. ಸಿಡಿಆರ್ ಪ್ರಕಾರ ಅವರ ಮೊಬೈಲ್ ಫೋನ್ ಟವರ್ ಲೋಕೇಷನ್ ನಿಂದ ಅವರ ಉಪಸ್ಥಿತಿ ಸಾಬೀತಾಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ತಿಳಿಸಿದೆ.

ಆಗಸ್ಟ್ 9 ರ ಬೆಳಗ್ಗೆ ಸೆಮಿನಾರ್ ಕೋಣೆಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ರಾಯ್ ನನ್ನು ಆಗಸ್ಟ್ 10 ರಂದು ಬಂಧಿಸಿದ್ದರು ಎಂದು ಸಿಬಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!