ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ಟ್ರೈನಿ ವೈದ್ಯೆ ಬರ್ಬರ ಹತ್ಯೆ ಅತ್ಯಾಚಾರಕ್ಕೆ ಇಡೀ ದೇಶವೇ ಮರುಗುತ್ತಿದೆ. ಆಕೆಯ ಡೈರಿಯ ಕೊನೆಯಲ್ಲಿ ಏನು ಬರೆದಿದ್ಲು ಗೊತ್ತಾ? ಪರೀಕ್ಷೆಯಲ್ಲಿ ಹೈಎಸ್ಟ್ ಮಾರ್ಕ್ಸ್ ಪಡೆದು ಎಂಡಿ ಕೋರ್ಸ್‌ನಲ್ಲಿ ಗೋಲ್ಡ್ ಮೆಡಲ್ ತೆಗೆದುಕೊಳ್ಳಬೇಕು.. ಎಂದು.
ಆಕೆಯ ತಂದೆಯ ಪ್ರಕಾರ, ಸಂತ್ರಸ್ತೆ ತನ್ನ ಕೊನೆಯ ದಿನಚರಿಯಲ್ಲಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ತನ್ನ ಎಂಡಿ ಕೋರ್ಸ್‌ನಲ್ಲಿ ಚಿನ್ನದ ಪದಕ ವಿಜೇತೆಯಾಗಬೇಕೆಂದು ಬರೆದಿದ್ದಾಳೆ. ಇದು ಜೀವನದಲ್ಲಿ ಆಕೆಯ ಗುರಿಗಳ ಕಡೆಗೆ ಮತ್ತು ವೈದ್ಯಕೀಯ ವೃತ್ತಿಯ ಕಡೆಗೆ ತನ್ನ ಸಮರ್ಪಣೆಯನ್ನು ತೋರಿಸುತ್ತದೆ. ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಗೆ ಹೊರಡುವ ಮೊದಲು ಅವಳು ಡೈರಿ ಬರೆದಿದ್ದಳು ಎನ್ನಲಾಗಿದೆ.
ತಮ್ಮ ಮಗಳು ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿನಿ. ವೈದ್ಯೆಯಾಗುವ ಗುರಿಯನ್ನು ಸಾಧಿಸಲು ಅವಳು ಸಾಕಷ್ಟು ಪರಿಶ್ರಮ ಪಟ್ಟಿದ್ದಾಳೆ. ಆಕೆಯನ್ನು ಬೆಳೆಸಲು ಕುಟುಂಬವು ಹಲವಾರು ತ್ಯಾಗ ಮಾಡಿದೆ. ನ್ಯಾಯ ಸಿಗುವ ಭರವಸೆ ಇದೆ. ಆದರೆ ಆಕೆ ಬಿಟ್ಟು ಹೋದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಸ್ವಲ್ಪ ಸಮಾಧಾನ ಸಿಗುತ್ತದೆ ಎಂದು ವೈದ್ಯೆಯ ಅಪ್ಪ ಹೇಳಿದ್ದಾರೆ.