ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರದ ಮಂತ್ರಿಗಳ ಮೇಲೆ ಭ್ರಷ್ಟಾಚಾರ ಆರೋಪ ಹೆಚ್ಚಾಗುತ್ತಿದೆ. ಇದರ ನಡುವೆ ಇದೀಗ ಮಮತಾ ಬ್ಯಾನರ್ಜಿ ಕುಟುಂಬಸ್ಥರ ವಿರುದ್ಧ ಕೋಲ್ಕತಾ ಹೈಕೋರ್ಟ್ ಮಹತ್ವದ ನಿರ್ದೇಶ ನೀಡಿದೆ.
ಮಮತಾ ಬ್ಯಾನರ್ಜಿ ಕುಟುಂಬಸ್ಥರ ಆಸ್ತಿಯಲ್ಲಿ ಗಣನೀಯ ಏರಿಕೆಯಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ , 6 ಕುಟಂಬಸ್ಥರು ಮುಂದಿನ 4 ವಾರಗಳಲ್ಲಿ ಆಸ್ತಿ, ಆದಾಯ ಸೇರಿದಂತೆ ಎಲ್ಲಾ ವಿವರಗಳ ಅಫಿಡವಿಟ್ ಸಲ್ಲಿಸಲು ಕೋರ್ಟ್ ಸೂಚಿಸಿದೆ.
ಸಾಮಾಜಿಕ ಕಾರ್ಯಕರ್ತ ಅಜಿತ್ ಮುಂಜುಂದಾರ್ ಈ ಕುರಿತು ಹೈಕೋರ್ಟ್‌ಗೆ ದೂರು ನೀಡಿದ್ದರು.
ಮಮತಾ ಬ್ಯಾನರ್ಜಿ ಕುಟುಂಬದ 6 ಸದಸ್ಯರ ಆಸ್ತಿಯಲ್ಲಿ ಭಾರಿ ಏರಿಕೆಯಾಗಿದೆ. ಹಲವು ಆಸ್ತಿಗಳನ್ನು ಖರೀದಿದ್ದಾರೆ. ಅಲ್ಪ ಸಮಯದಲ್ಲಿ ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆಗಳು ಹಲವು ಬಾರಿ ಎದ್ದಿದೆ. ಈ ಕುರಿತು ಅಜಿತ್ ಮುಜುಂದಾರ್ ಕೋರ್ಟ್‌ಗೆ ದೂರು ನೀಡಿದ್ದರು. ಎರಡು ವಾರಗಗಳಲ್ಲಿ ಅಫಿಡವಿತ್ ಸಲ್ಲಿಸಲು ಕೋರ್ಟ್ ಸೂಚನೆ ನೀಡಬೇಕು ಎಂದು ಅಜಿತ್ ಮುಜುಂದಾರ್ ಮನವಿ ಮಾಡಿದ್ದರು. ಈ ಕುರಿತು ವಿಚಾರೆ ನಡೆಸಿದ ಮುಖ್ಯ ನ್ಯಮೂರ್ತಿ ಪ್ರಕಾಶ್ ಶ್ರೀವಾತ್ಸವ್ ಹಾಗೂ ಜಸ್ಟೀಸ್ ರಾಜಶ್ರೀ ಭಾರದ್ವಾಜ ಅವರಿದ್ದ ದ್ವಿಸದಸ್ಯ ಪೀಠ ಮಹತ್ವದ ನಿರ್ದೇಶ ನೀಡಿದೆ.
ನಾಲ್ಕು ವಾರದಲ್ಲಿ ಮಮತಾ ಕುಟುಂಬಸ್ಥರು ಆಸ್ತಿ ವಿವರ ಸಲ್ಲಿಸಲು ಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಮಮತಾ ಬ್ಯಾನರ್ಜಿಯ ಕುಟುಂಬಸ್ಥರಾದ ಅಜಿತ್ ಬ್ಯಾನರ್ಜಿ, ಅಮಿತ್ ಬ್ಯಾನರ್ಜಿ, ಸಮೀರ್ ಬ್ಯಾನರ್ಜಿ, ಸ್ವಪನ್ ಬ್ಯಾನರ್ಜಿ, ಗಣೇಶ್ ಬ್ಯಾನರ್ಜಿ ಹಾಗೂ ಕಾಜ್ರಿ ಬ್ಯಾನರ್ಜಿ ಇದೀಗ ಕೋರ್ಟ್‌ಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಿದೆ.