ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್‌ನ ಹಿರಿಯ ನಟ ವಿಜಯ್ ಕುಮಾರ್ ಅವರ ಪುತ್ರಿ ವನಿತಾ 4ನೇ ಮದುವೆಗೆ ರೆಡಿಯಾಗಿದ್ದಾರೆ. ಡ್ಯಾನ್ಸ್ ಕೊರಿಯೋಗ್ರಾಫರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದೇ ಅಕ್ಟೋಬರ್ 5ರಂದು ಡ್ಯಾನ್ಸ್ ಕೊರಿಯೋಗ್ರಾಫರ್ ರಾಬರ್ಟ್ ಜೊತೆ ವನಿತಾ ಮದುವೆ ಆಗುತ್ತಿರುವ ಬಗ್ಗೆ ನಟಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸೇವ್ ದಿ ಡೇಟ್ ಅಂತ ಹಾಕಿ ಅ.5ರಂದು ಮದುವೆ ಆಗುತ್ತಿರುವ ಮಾಹಿತಿ ನೀಡಿದ್ದಾರೆ.
ಇನ್ನೂ ವನಿತಾ 24 ವರ್ಷಗಳ ಹಿಂದೆ ಆಕಾಶ್ ಎಂಬುವವರ ಕೈ ಹಿಡಿದಿದ್ದರು. 7 ವರ್ಷಗಳ ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಅದೇ ವರ್ಷ ಆನಂದ್ ಜೊತೆ ಹಸೆಮಣೆ ಏರಿದ್ದರು. ಈ ಸಂಸಾರ ಕೂಡ ಬಹಳ ದಿನ ಉಳಿಯಲಿಲ್ಲ. 5 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು. 2ನೇ ಡಿವೋರ್ಸ್ ಬಳಿಕ 8 ವರ್ಷ ವನಿತಾ ಒಬ್ಬೊಂಟಿಯಾಗಿದ್ದರು. ಆದರೆ 2020ರಲ್ಲಿ ಪೀಟರ್ ಪೌಲ್ ಎಂಬುವವರ ಜೊತೆ 3ನೇ ಮದುವೆ ಆಗಿದ್ದರು. ಆದರೆ ಅದೇ ವರ್ಷ ಅದು ಮುರಿದು ಬಿತ್ತು. 3ನೇ ಬಾರಿ ಡಿವೋರ್ಸ್ ಪಡೆದುಕೊಂಡಿದ್ದರು. ಪೀಟರ್‌ಗೆ ಅದಾಗಲೇ ಒಂದು ಮದುವೆ ಆಗಿ ಇಬ್ಬರು ಮಕ್ಕಳು ಇದ್ದರು. ಆತನ ಪತ್ನಿ ತನ್ನಿಂದ ಡಿವೋರ್ಸ್ ಪಡೆಯದೇ ಪೀಟರ್ ಎರಡನೇ ಮದುವೆ ಆಗಿದ್ದಾರೆ ಎಂದು ದೂರು ನೀಡಿದ್ದರು. ಹಾಗಾಗಿ ಆತನಿಂದಲೂ ವನಿತಾ ಡಿವೋರ್ಸ್ ಪಡೆದು ದೂರಾಗುವಂತಾಯಿತು.
ಅಂದಹಾಗೆ, ಮಾಣಿಕ್ಕಂ, ಮಳ್ಳಿ ಪೆಳ್ಳಿ, ಅನೀತಿ, ಹಾರ ಹೀಗೆ ಒಂದಿಷ್ಟು ಸಿನಿಮಾಗಳಲ್ಲಿ ವನಿತಾ ವಿಜಯ್ ಕುಮಾರ್ ನಟಿಸಿದ್ದಾರೆ.