ಯುವ ಮತದಾರರನ್ನು ಸೆಳೆಯಲು ಕೊಪ್ಪಳ ಜಿಲ್ಲಾಡಳಿತದ ಎಫರ್ಟ್ಸ್‌, ಬೂತ್‌ ಹೇಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿನೂತನ ಪ್ರಯತ್ನವನ್ನು ಕೊಪ್ಪಳ ಜಿಲ್ಲಾಡಳಿತ ಮಾಡಿಕೊಂಡಿದೆ. ಇಡೀ ಮತಗಟ್ಟೆಯನ್ನು ಅನೇಕ ಚಿತ್ರಗಳಿಂದ, ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ.

ಯುವ ಮತದಾರರಿಗಾಗಿ ನೂತನ ಮತಗಟ್ಟೆ: ಬಲೂನ್, ಚಿತ್ರಗಳಿಂದ ಮತಗಟ್ಟೆ ಅಲಂಕಾರಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ಯುವ ಮತಗಟ್ಟೆಯನ್ನಾಗಿ ಮಾಡಲಾಗಿದ್ದು, ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿದೆ. ಮತಗಟ್ಟೆ ಹೊರಗಡೆ ದೊಡ್ಡ ಕಟೌಟ್ ಹಾಕಲಾಗಿದ್ದು, ನಮ್ಮ ಮತ ನಮ್ಮ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ಚುನಾವಣೆ ಪರ್ವ ದೇಶದ ಗರ್ವ ಅನ್ನೋ ಬರಹಗಳನ್ನು ಬರೆಸಲಾಗಿದೆ. ಇನ್ನು ಕಟ್ಟಡದ ಒಳ ಹೋಗುತ್ತಿದ್ದಂತೆ ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ. ಇಡೀ ಕಟ್ಟಡವನ್ನು ಅನೇಕ ಚಿತ್ರಗಳಿಂದ ಅಲಂಕಾರ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!