ನಾಟು ನಾಟು ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್ ಅಧಿಕಾರಿಗಳು: ಪ್ರಧಾನಿ ಮೋದಿ ಅಂದ್ರು ಥಮ್ಸ್ ಅಪ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಶ್ವದೆಲ್ಲೆಡೆ ಹವಾ ಹಬ್ಬಿಸಿದ ಸಿನಿಮಾ ಆರ್ ಆರ್ ಆರ್. ಅದ್ರಲ್ಲೂ ಸಿನಿಮಾದ ನಾಟು-ನಾಟು ಹಾಡಿಗೆ ಕುಣಿಯದೆ ಇದ್ದವ್ರುನ್ ಇಲ್ಲ.

ಕೇವಲ ಭಾರತೀಯರು ಅಲ್ಲದೇವಿದೇಶಿ ಮಂದಿಗೆ ಗುಂಗು ಹಿಡಿಸಿದೆ ನಾಟು ನಾಟು ಹಾಡು. ಇದೀಗ ಕೊರಿಯನ್ ಅಧಿಕಾರಿಗಳು ನಾಟು-ನಾಟು ಹಾಡಿಗೆ ಕುಣಿದಿದ್ದು ಅವರ ನೃತ್ಯ ಕಂಡು ಸ್ವತಃ ಪ್ರಧಾನಿ ಮೋದಿ (Narendra Modi) ಶ್ಲಾಘಿಸಿದ್ದಾರೆ.

ಭಾರತದ ಕೊರಿಯನ್ ರಾಯಭಾರಿ ಕಚೇರಿಯ ಸಿಬ್ಬಂದಿ ನಾಟು-ನಾಟು ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊರಿಯ ರಾಯಭಾರಿ ಚಾಂಗ್ ಜೆ ಬೊಕ್ ಸಹ ತಮ್ಮ ಕಚೇರಿಯ ಅಧಿಕಾರಿಗಳೊಟ್ಟಿಗೆ ಸ್ಟೆಪ್ ಹಾಕಿದ್ದಾರೆ.

ರಾಮ್ ಚರಣ್ ತೇಜ-ಜೂ ಎನ್​ಟಿಆರ್ ಅವರ ಹುಕ್ ಸ್ಟೆಪ್​ಗಳನ್ನೇ ಕೊರಿಯನ್ ರಾಯಭಾರಿ ಕಚೇರಿಯ ಅಧಿಕಾರಿಗಳು ಮಾಡಲು ಪ್ರಯತ್ನಿಸಿದ್ದು, ಕಚೇರಿಯ ಮಹಿಳಾ ಉದ್ಯೋಗಿಗಳು, ಪುರುಷ ಉದ್ಯೋಗಿಗಳೆಲ್ಲರೂ ಒಟ್ಟಿಗೆ ಸೇರಿ, ಕೊರಿಯನ್ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಹಾಡಿಗೆ ಸ್ಟೆಪ್ ಹಾಕಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋವನ್ನು ಕಂಡ ಪ್ರಧಾನಿ ಮೋದಿ, ರೀಟ್ವೀಟ್ ಮಾಡಿದ್ದು, ರಾಯಭಾರಿ ಕಚೇರಿ ಸಿಬ್ಬಂದಿಯ ಉತ್ಸಾಹಭರಿತ ಟೀಂ ವರ್ಕ್ ಅನ್ನು ಶ್ಲಾಘಿಸಿದ್ದಾರೆ ಜೊತೆಗೆ ವಿಡಿಯೋ ಚೆನ್ನಾಗಿದೆಯೆಂದು ಹೇಳಿ ಥಮ್ಸ್ ಅಪ್​ ಸಹ ನೀಡಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಭಾರತದ ಕೊರಿಯನ್ ರಾಯಭಾರಿ ಕಚೇರಿ, ”ನಿಮಗೆ ನಾಟು-ನಾಟು ಗೊತ್ತೆ? ಕೊರಿಯನ್ ರಾಯಭಾರಿ ಕಚೇರಿಯ ನಾಟು-ನಾಟು ಸಾಂಗ್ ಕವರ್ ಅನ್ನು ನಾವು ಪ್ರಸ್ತುತ ಪಡಿಸುತ್ತಿದ್ದೇವೆ. ಕೊರಿಯನ್ ರಾಯಭಾರಿ ಚಾಂಗ್ ಜೆ ಬೊಕ್ ಸಹ ಕಚೇರಿಯ ಎಲ್ಲ ಸಿಬ್ಬಂದಿಗಳೊಂದಿಗೆ ಡ್ಯಾನ್ಸ್ ಮಾಡಿರುವುದು ಕಾಣಬಹುದು” ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಪಾಕಿಸ್ತಾನದ ಜನಪ್ರಿಯ ನಟಿ ಹನಿಯಾ ಆಮಿರ್, ಪಾಕಿಸ್ತಾನದ ವಿವಾಹವೊಂದರಲ್ಲಿ ನಾಟು-ನಾಟು ಹಾಡಿಗೆ ಮೈಮರೆತು ಡ್ಯಾನ್ಸ್ ಮಾಡಿದ್ದರು. ಅ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!