ಸೋರುವ ಸೂರಿನಡಿ ಕಂಗಾಲಾಗಿದ್ದ ಬಜಪೆಯ ಗುಲಾಬಿ ಅಜ್ಜಿಗೆ ಸಿಕ್ಕಿತು ಶಾಸಕ ಕೋಟ್ಯಾನ್ ರಕ್ಷಣೆ

ಹೊಸದಿಗಂತ ವರದಿ ಮಂಗಳೂರು:

ವಯಸ್ಸಾದ ನಂತರ ತಲೆಮೇಲೊಂದು ನೆಮ್ಮದಿಯ ಸೂರು, ದಿನಕ್ಕೆ ಮೂರು ಹೊತ್ತು ಊಟ ಸಿಕ್ಕರೆ ಅಷ್ಟೇ ಸಾಕು ಎಂದು ಹೇಳುವ ಎಷ್ಟೋ ವೃದ್ಧರಿದ್ದಾರೆ. ಆದರೆ ಬಜ್ಪೆಯಲ್ಲಿರುವ ಗುಲಾಬಿ ಅಜ್ಜಿಗೆ ಇಷ್ಟೊಂದು ಅದೃಷ್ಟ ಇಲ್ಲ!

ಹೌದು, ಸರಿಯಾದ ಸೂರಿಲ್ಲದೆ, ನೋಡಿಕೊಳ್ಳಲು ಯಾರೂ ಇಲ್ಲದೆ ಗುಲಾಬಿ ಅಜ್ಜಿ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಅಜ್ಜಿಯ ಜೀವನ, ಮನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀಗ ಶಾಸಕರಾದ ಉಮಾನಾಥ್ ಕೋಟ್ಯಾನ್ ಅಜ್ಜಿಯ ನೆರವಿಗೆ ಧಾವಿಸಿದ್ದಾರೆ.

ಬಜ್ಪೆಯಲ್ಲಿ ವಾಸ್ತವಿರುವ ಗುಲಾಬಿ ಅಜ್ಜಿ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ರಾಜೇಶ್ ಅಮೀನ್ ಲೋಕೇಶ್ ಪೂಜಾರಿ ವಿಜಯಕುಮಾರ್ ಕೆಂಜಾರು ಕಾನ, ಗಣೇಶ್ ಪೂಜಾರಿ, ಶಿವರಾಮ ಪೂಜಾರಿ ಇವರುಗಳು ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್‌ಗೆ ವಿಷಯ ಮುಟ್ಟಿಸಿದ್ದಾರೆ.

ಮರುದಿನ ಬೆಳಗ್ಗೆ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಜ್ಜಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿಸಿದ್ದು, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಲ್ಕಿ ಮೂಡಿಬಿದರೆ ರೈತ ಮೋರ್ಚಾ ಅಧ್ಯಕ್ಷರಾದ ರಾಜೇಶ್ ಅಮೀನ್ (RK), ಬಿಜೆಪಿ ಪ್ರಮುಖರಾದ ಲೋಕೇಶ್ ಪೂಜಾರಿ ಬಜ್ಪೆ, ರಿತೇಶ್ ಶೆಟ್ಟಿ, ವಿಜಯಕುಮಾರ್ ಕೆಂಜಾರು ಕಾನ ಅಧ್ಯಕ್ಷರು ಬಜ್ಪೆ ಮಹಾಶಕ್ತಿ ಕೇಂದ್ರ, ಶಿವರಾಮ ಪೂಜಾರಿ,ದಿನೇಶ್ ಪೊರ್ಕೋಡಿ, ಗಣೇಶ್ ಬಜ್ಪೆ, ದಿನೇಶ್ ಕೆ ಬಂಗೇರ, ಬಜ್ಪೆ ಪೊಲೀಸ್ ಅಧಿಕಾರಿಗಳು,ಹಾಗೂ ಸಿಬ್ಬಂದಿ ವರ್ಗ ಬಜಪೆ ಪಟ್ಟಣ ಪಂಚಾಯತ್ ಇಂಜಿನಿಯರ್ ನಳಿನ್ ಕುಮಾರ್ ಮತ್ತು ಬಾಲಕೃಷ್ಣ ಕತ್ತಲ್ ಸಾರ್,ಸಿರಾಜ್ ಬಜ್ಪೆ, ಫಯಾಜ್, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸೂಪರ್ವೈಸರ್ ಅರುಣಾ ಸಾಲ್ಯಾನ್ ಮತ್ತು ಸದಸ್ಯರು ಕಿರಣ್ ಅತ್ತೋಲಿಗೆ, ಯಶೋಧರ್ ಪೂಜಾರಿ, ಆಶಾ ಕಾರ್ಯಕರ್ತರು ಅಕ್ಷಿತ್ ಪೂಜಾರಿ, ನಿರಂಜನ್ ಕರ್ಕೇರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!