ಕೋಝಿಕ್ಕೋಡ್ ಆಯ್ತು ಈಗ ಪಾಲಕ್ಕಾಡ್ ಕೋರ್ಟ್ ನಿಂದ ಕಾಂತಾರಕ್ಕೆ ಶಾಕ್: ವರಾಹ ರೂಪಂ ಹಾಡಿಗೆ ಮತ್ತೆ ಬಿತ್ತು ತಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೋಝಿಕ್ಕೋಡ್ ಕೋರ್ಟ್ ‘ಕಾಂತಾರ’ ಚಿತ್ರದ ‘ವರಾಹ ರೂಪಂ.. ಹಾಡಿಗೆ’ ತಡೆ ನೀಡಿ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಪಾಲಕ್ಕಾಡ್ ಕೋರ್ಟ್​​ನಿಂದಲೂ ಸಿನಿಮಾ ತಂಡಕ್ಕೆ ಶಾಕ್ ಎದುರಾಗಿದೆ.

ಪಾಲಕ್ಕಾಡ್ ಕೋರ್ಟ್ ಕೂಡ ಈಗ ಮತ್ತೊಂದು ಆದೇಶ ನೀದ್ದು, ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿ ಕೇರಳ ಸ್ಥಳೀಯ ನ್ಯಾಯಾಲಯವು ಆದೇಶ ಹೊರಡಿಸಿದೆ.

‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡು ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್​​’ ಕೇಸ್ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಈಗ ಪಾಲಕ್ಕಾಡ್ ಕೋರ್ಟ್ ಕೂಡ ಇದೇ ಮಾದರಿಯ ಆದೇಶ ಹೊರಡಿಸಿದೆ.

‘ಮಾತೃಭೂಮಿ ಮ್ಯೂಸಿಕ್’​ ಪಾಲಕ್ಕಾಡ್​ನ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ಕೇಸ್ ದಾಖಲು ಮಾಡಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ‘ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ, ಪ್ರಸಾರ ಮಾಡುವಂತಿಲ್ಲ’ ಎಂದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!