ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸತಾಗಿ ಉದ್ಘಾಟನೆಯಾಗಿರುವ ವೈಟ್‌ಫೀಲ್ಡ್-ಕೆ.ಆರ್.ಪುರಂ ಮೆಟ್ರೋದಲ್ಲಿ ಮೊದಲ ದಿನವೇ 16 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಮಾರ್ಚ್ 26 ಭಾನುವಾರ ಬೆಳಗ್ಗೆ 7 ರಿಂದ ಸಂಜೆ 6 ರನಡುವೆ 16,319 ಮಂದಿ ಪ್ರಯಾಣಿಸಿದ್ದಾರೆ. ಮೆಟ್ರೋ ಆಗಮನಕ್ಕಾಗಿ ಸಾಕಷ್ಟು ಮಂದಿ ಕಾಯುತ್ತಿದ್ದು, ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಸಹಾಯವಾಗಿದೆ.
ವೈಟ್‌ಫೀಲ್ಡ್ ಮೆಟ್ರೋದಿಂದ ಕೆ.ಆರ್. ಪುರವರೆಗಿನ ಬೆಂಗಳೂರು ಮೆಟ್ರೋದ ಎರಡನೇ ಹಂತದ ವಿಸ್ತರಣೆ ಯೋಜನೆಯಲ್ಲಿ ಈಗಾಗಲೇ 13.71 ಕಿ.ಮೀ ವಿಸ್ತರಣೆಯಾಗಿದೆ.