ಮಲಯಾಳಂಗೆ ಎಂಟ್ರಿ ಕೊಟ್ಟ ಬೇಬಮ್ಮ: ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಬರಲಿದ್ದಾರೆ ಕನ್ನಡದ ಬೆಡಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಪ್ಪೇನ ಸಿನಿಮಾ ಹಿಟ್ ಸಿಕ್ಕಿದ್ದೇ ತಡ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರದ ಮೂಲಕ ಕೃತಿ ಶೆಟ್ಟಿ ನಾಉಕಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಕೃತಿ ಈಗ ಟಾಪ್ ಹೀರೋಯಿನ್ ಗಳ ಪಟ್ಟಿಗೆ ಸೇರಿ ಸಾಲು ಸಾಲು ಆಫರ್ ಗಿಟ್ಟಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಎರಡು ಸೋಲು ಕಂಡರೂ ಬೇಬಮ್ಮನ ವೇಗ ಮಾತ್ರ ತಗ್ಗಿಲ್ಲ. ಟಾಲಿವುಡ್, ತಮಿಳು ಆಯ್ತು ಇದೀಗ  ಮಲಯಾಳಂನಲ್ಲಿ ಪಾದಾರ್ಪಣೆ ಮಾಡಿದ್ದಾರೆ ಕನ್ನಡದ ಬೆಡಗಿ.

ಕೃತಿ ಮಲಯಾಳಂನ ಸ್ಟಾರ್ ಹೀರೋ ಟೊವಿನೋ ಥಾಮಸ್ ಜೊತೆ ನಟಿಸಲಿದ್ದಾರೆ. ಟೋವಿನೋ ಥಾಮಸ್ ನಾಯಕನಾಗಿ ‘ಅಜಯಂತೇ ರಂಧಂ ಮೋಷನಂ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ 3ಡಿಯಲ್ಲಿ ತಯಾರಾಗುತ್ತಿದೆ. ಮೇಲಾಗಿ ಈ ಸಿನಿಮಾ ಭಾರತದಾದ್ಯಂತ ಬಿಡುಗಡೆಯಾಗಲಿದೆ. ಕೃತಿ ಶೆಟ್ಟಿ ಜೊತೆಗೆ ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಪೂಜಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳನ್ನು ಕೃತಿ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ಮಲಯಾಳಂನಲ್ಲಿ ಪಾದಾರ್ಪಣೆ ಮಾಡುತ್ತಿದ್ದೇನೆ. ಅಂತಹ ಸ್ಟಾರ್‌ಗಳ ಜೊತೆ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!