ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಕಬೀರ್ ಬಹಿಯಾ ಜೊತೆಗಿನ ಡೇಟಿಂಗ್ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಕಬೀರ್ ಜೊತೆಗಿನ ರಿಲೇಷನ್‌ಶಿಪ್ ಸುದ್ದಿ ಸುಳ್ಳು ಎಂದು ಕೃತಿ ಸನೋನ್ ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಸುದ್ದಿ ವೈರಲ್ ಆದಾಗ ನನಗೆ ಮಾತ್ರವಲ್ಲದೇ ನಮ್ಮ ಕುಟುಂಬಕ್ಕೂ ನೋವಾಗುತ್ತದೆ. ಒಬ್ಬರ ಬಗ್ಗೆ ಕಟ್ಟುಕಥೆ ಹರಡುವುದಕ್ಕೂ ಮುನ್ನ ನಿಜವೇನು ಎಂಬುದು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಬೇಗನೆ ವೈರಲ್ ಆಗುತ್ತದೆ.
ಹೀಗೆ ಸುಳ್ಳು ಸುದ್ದಿ ಪ್ರತಿ ಬಾರಿ ಹಬ್ಬಿದಾಗ ಸ್ಪಷ್ಟನೆ ನೀಡುವುದು ಕಿರಿಕಿರಿ ಆಗುತ್ತದೆ. ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ ಎಂದು ಸಂದರ್ಶನವೊಂದರಲ್ಲಿ ಕೃತಿ ಸನೋನ್ ಮಾತನಾಡಿದ್ದಾರೆ. ಈ ಮೂಲಕ ಕಬೀರ್ ಜೊತೆಗಿನ ಡೇಟಿಂಗ್ ವಿಚಾರ ಸುಳ್ಳು ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.