ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ, ರಂಜಾನ್ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್ಗಳ ಓಡಾಟದ ನಿರ್ಧಾರ ಕರಾವಳಿಯ ಪಾಲಿಗೆ ಖುಷಿ ನೀಡಿದ್ದು, ಇಲ್ಲಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ.
ಬೆಂಗಳೂರು ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಕೊಲ್ಲೂರು, ಭಾಗಗಳಿಗೆ ಹೆಚ್ಚುವರಿ ಬಸ್ ಸೇವೆ ಈ ಭಾಗದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮಂದಿಗೂ ಸಂತಸ ತಂದಿದೆ.
ಜೊತೆಗೆ ಇಲ್ಲಿನ ಬೀಚ್, ರೆಸಾರ್ಟ್ಗಳಲ್ಲಿಯೂ ಪ್ರವಾಸಿಗರ ಕಲರವ ಕೇಳಿಬರುವ ನಿರೀಕ್ಷೆಯಿದೆ. ಈ ನಡುವೆ ಕರಾವಳಿ ಬಿಸಿಲ ಹೊಡೆತಕ್ಕೆ ಕಾದ ಕಬ್ಬಿಣದಂತಾಗಿದ್ದು, ಒಂದೆಡರಡು ಮಳೆಯಾದಲ್ಲಿ ಈ ಭಾಗದ ಚಿತ್ರಣವೇ ಬದಲಾಗಲಿದೆ.