ರಾಜಕೀಯದ ಕುಬೇರ ಡಿ.ಕೆ. ಶಿವಕುಮಾರ್ , 1,214 ಕೋಟಿ ಆಸ್ತಿ ಒಡೆಯ! 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿ ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಣೆ ಮಾಡಿದ್ದಾರೆ.

2018 ರಲ್ಲಿ ಡಿಕೆಶಿ ಒಟ್ಟಾರೆ 840 ಕೋಟಿ ರೂ ಮೌಲ್ಯದ ಆಸ್ತಿಯಿದೆ ಎಂದು ಹೇಳಿದ್ದರು. ಈ ಬಾರಿ ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ತಮ್ಮ ಆಸ್ತಿ ವಿವರವನ್ನು ಡಿಕೆಶಿ ನೀಡಿದ್ದಾರೆ.

ಡಿಕೆಶಿಯದ್ದು 1,214 ಕೋಟಿ, ಪತ್ನಿ ಉಷಾ ಹೆಸರಿನಲ್ಲಿ 133 ಕೋಟಿ ಹಾಗೂ ಪುತ್ರ ಆಕಾಶ್ ಹೆಸರಿನಲ್ಲಿ 66 ಕೋಟಿ ರೂ. ಆಸ್ತಿ ಇದೆ. ಡಿಕೆಶಿ ಬಳಿ ಒಟ್ಟು 970 ಕೋಟಿ ಸ್ಥಿರಾಸ್ತಿ ಹಾಗೂ 244 ಕೋಟಿ ರೂ. ಚರಾಸ್ತಿ ಇದೆ. ಇದರ ಜತೆಗೆ 266 ಕೋಟಿ ಸಾಲವನ್ನೂ ಅವರು ಹೊಂದಿದ್ದಾರೆ.

ಡಿಕೆಶಿ ಬಳಿ 23 ಲಕ್ಷ ವಾಚ್ ಇದೆ, ಸದ್ಯಕ್ಕೆ ಪ್ರತಿ ವರ್ಷ 14 ಕೋಟಿ ಆದಾಯ ಇದೆ ಎಂದು ಡಿಕೆಶಿ ಹೇಳಿದ್ದಾರೆ. ಮನೆಯಲ್ಲಿ ನಾಲ್ಕು ಕೆಜಿ ಬಂಗಾರ ಇದ್ದು, ಸಾಕಷ್ಟು ಕೃಷಿ ಜಮೀನು, ವಾಣಿಜ್ಯ ಕಟ್ಟಡಗಳು ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!