ಎರಡನೇ ಬಾರಿ ಕಮಲಶಿಲೆ ದುರ್ಗೆಯ ಪಾದ ತೊಳೆದ ಕುಬ್ಜಾ ನದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ನಿರಂತರ ಮಳೆಯಾಗಿಟ್ಟಿದ್ದು, ಇದರಿಂದಾಗಿ ನದಿಗಳು ಉಕ್ಕೇರಿ ಹರಿಯುತ್ತಿವೆ. ಜಲಾಶಯಗಳಿಗೆ ಭಾರಿ ಪ್ರಮಾಣದ ಹರಿದುಬರುತ್ತಿದೆ.

ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿ- ಕಾರ್ಕಳ ದಲ್ಲಿ ನಿರಂತರ ಮಳೆಯಾಗುತ್ತಿದೆ. ಕುಬ್ಬಾ ನದಿ ಮತ್ತೆ ತುಂಬಿ ಹರಿಯುತ್ತಿದೆ. ಕುಂದಾಪುರದ ಕಮಲಶಿಲೆ ಬ್ರಾಹ್ಮ ದುರ್ಗಾಪರಮೇಶ್ವರಿ ದೇಗುಲಕ್ಕೆ ನೀರು ನುಗ್ಗಿದ್ದು, ಈ ವರ್ಷದಲ್ಲಿ ಎರಡನೇ ಬಾರಿಗೆ ನದಿ ನೀರು ದೇಗುಲದ ಗರ್ಭಗುಡಿಗೆ ಪ್ರವೇಶಿಸಿದೆ.

ಭುಧವಾರ ರಾತ್ರಿ 12.30 ರಿಂದ 2 ಗಂಟೆಯವರೆಗೆ ದೇಗುಲಕ್ಕೆ ನದಿ ನೀರು ಪ್ರವೇಶಿಸಿ ದುರ್ಗಾಪರಮೇಶ್ವರಿ ದೇವಿಯ ಪಾದ ಸ್ಪರ್ಶಿಸಿದೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!