ಕುದುರೆಮುಖದ ಸ್ವರ್ಗ ಕಾಣಲು ಒಮ್ಮೆ ಚಾರಣ ಮಾಡಿ : ಇಲ್ಲಿನ ವಿಶೇಷತೆಗಳು ಹೀಗಿವೆ

ಜಗತ್ತಿನೆಲ್ಲೆಡೆ ಸುತ್ತಿ ಅಲೆದಾಡಿದರೂ ಸಹ ನೀವು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಕೊನೆಯೇ ಇಲ್ಲ. ಅದ್ರಲ್ಲೂ ನೀವು ಪ್ರಯಾಣ ಬೆಳೆಸೋಕೆ ಇಚ್ಚಿಸಿದರೆ ಭೇಟಿ ನೀಡಬಹುದಾದ ಪ್ರಸಿದ್ಧ ಪ್ರವಾಸಿ ಸ್ಥಳಗಳು ಕರ್ನಾಟಕದಲ್ಲಿ ಹೇರಳವಾಗಿವೆ. ಈ ಪೈಕಿ ಚಳಿಗಾಲದಲ್ಲಿ ಚಾರಣ ಮಾಡೋಕೆ ಬಯಸಿದ್ರೆ, ನಿಸರ್ಗದ ಸ್ವರ್ಗವನ್ನೇ ಮೈದುಂಬಿಕೊಂಡಿರುವ ಚಿಕ್ಕಮಗಳೂರಿನ ಕುದುರೆಮುಖಕ್ಕೆ ಒಮ್ಮೆ ಭೇಟಿ ನೀಡಿ.

ಕುದುರೆಮುಖದಲ್ಲಿ ಚಾರಣ ಬೆಸ್ಟ್‌ ಏಕೆ ? :
ಚಾರಣ ಮಾಡೋದಂದ್ರೆ ಅನೇಕರಿಗೆ ತುಂಬಾನೆ ಪ್ರೀತಿ. ಅದೇನೋ ಒಂಥರಾ ರೋಮಾಂಚನ, ನಡೆದಷ್ಟೂ ಕಾಣ ಸಿಗುವ ನಿಸರ್ಗದ ಸೌಂದರ್ಯ, ವಿಶಾಲವಾಗಿ ಹಬ್ಬಿರುವ ಪರ್ವತಗಳು, ಝರಿ ಹಳ್ಳ ಕೊಳ್ಳಗಳು, ತಂಗಾಳಿ ಮತ್ತು ಹಾರಾಡುವ ಪಕ್ಷಿ ಸಂಕುಲಗಳು. ಹೇಳಿದಷ್ಟೂ ಮುಗಿಯದ ವಿಶೇಷ ಅನುಭವನ್ನು ಇಲ್ಲಿ ಚಾರಣ ಮಾಡುವ ಮೂಲಕ ಪಡೆಯಬಹುದು.

ರಾಷ್ಟ್ರೀಯ ಉದ್ಯಾನವನ :
ಸುತ್ತ ಹಸುರಿನಿಂದಲೂ ಕೂಡಿರುವ ಈ ಉದ್ಯಾನವನ ಸುಮಾರು 600 ಚ.ಮೀ. ವಿಸ್ತೀರ್ಣದಲ್ಲಿ ಹಬ್ಬಿಕೊಂಡಿದೆ. ಇಳಿಜಾರಿನ ರೀತಿಯಲ್ಲಿ ಕಾಣುವ ಈ ಬೆಟ್ಟದಲ್ಲಿ ಅನೇಕ ಸಸ್ತನಿಗಳು, ಕಾಡುಹಂದಿ, ಕಾಡುನಾಯಿ, ಸಾಂಬಾರ್, ಚಿರತೆ ಹಾಗೂ ವಾನರಗಳನ್ನು ಕಾಣಬಹುದು.

ಈ ಪ್ರದೇಶವನ್ನು 1987ರಲ್ಲಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಇದು ನಿತ್ಯಹರಿದ್ವರ್ಣ ಕಾಡಾಗಿದ್ದರೂ ಇಲ್ಲಿಯ ವಾತಾವರಣ ಕೆಲವೊಮ್ಮೆ ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ.

ಚಾರಣಕ್ಕೆ ಯಾವ ಸಮಯ ಬೆಸ್ಟ್‌ ? :
ಕುದುರೆಮುಖ ಚಾರಣಕ್ಕೆ ಅಕ್ಟೋಬರ್‌ನಿಂದ ಮೇ ವರೆಗೆ ಸೂಕ್ತ ಸಮಯ. ಈ ಸಮಯದಲ್ಲಿ ವನ್ಯಜೀವಿಗಳು ನೋಡಲು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಭೇಟಿ ನೀಡಬಹುದಾದ ಸಮೀಪದ ಸ್ಥಳಗಳು :
ಕುದುರೆಮುಖ ಸಮೀಪವಿರುವ ಗಂಗಾಮೂಲ, ಶೃಂಗೇರಿ ಶಾರದಾಂಬ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲವನ್ನು ವೀಕ್ಷಿಸಲು ಭೇಟಿ ನೀಡಬಹುದು.

ಇಲ್ಲಿಗೆ ತಲುಪುವುದು ಹೇಗೆ ? :
ಬೆಂಗಳೂರಿನಿಂದ 360 ಕಿ.ಮೀ. ದೂರವಿರುವ ಚಿಕ್ಕಮಗಳೂರಿಗೆ ಭೇಟಿ ನೀಡಬೇಕು. ತದನಂತರ ಇಲ್ಲಿಂದ 95 ಕಿ.ಮೀ. ದೂರ ಚಲಿಸಿದರೆ ಕುದುರೆಮುಖಕ್ಕೆ ಭೇಟಿ ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!