ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕಾಸರಗೋಡು ಜಿಲ್ಲೆಯ ಬೇಕಲದಲ್ಲಿ ನಡೆಯುತ್ತಿರುವ ಬೇಕಲ ಬೀಚ್ ಫೆಸ್ಟ್ನಲ್ಲಿ ಕುಟುಂಬಶ್ರೀ ಹೊಸ ದಾಖಲೆ ಬರೆದಿದೆ.
ಕಳೆದ ನಾಲ್ಕು ದಿನಗಳಲ್ಲಿ ಕುಟುಂಬಶ್ರೀ, 8,23,590ರೂ. ಆದಾಯ ಸಂಗ್ರಹಿಸಿದೆ. ಬೇಕಲ ಬೀಚ್ ಫೆಸ್ಟ್ನಲ್ಲಿ 12 ಮಳಿಗೆ ತೆರೆದಿರುವ ಕುಟುಂಬಶ್ರೀ, ಮೂರನೇ ದಿನವಾದ ಡಿ.26ರಂದು ಅತಿ ಹೆಚ್ಚು ಅಂದರೆ 2.89 ಲಕ್ಷ ರೂ. ಮೊತ್ತದ ವಹಿವಾಟು ದಾಖಲಿಸಿದೆ.
ಮೊದಲ ದಿನ ಕುಟುಂಬಶ್ರೀ ಕೆಫೆಯಿಂದ 27,320 ರೂ., ಸಂಘಟನಾ ಸಮಿತಿಯ ರೆಸ್ಟೋರೆಂಟ್ನಿಂದ 82,400 ರೂ.ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಟಾಲ್ನಿಂದ 2120 ರೂ. ಸಂಗ್ರಹಿಸಿದ್ದರೆ, ಡಿ.25ರಂದು ಕುಟುಂಬಶ್ರೀ ಕೆಫೆಯಿಂದ 83240 ರೂ., ಸಂಘಟನಾ ಸಮಿತಿ ಕ್ಯಾಂಟೀನ್ನಿಂದ 80450ರೂ., ಉತ್ಪನ್ನ ಮಳಿಗೆಯಿಂದ 5180 ರೂ.ಗಳ ವಹಿವಾಟು ನಡೆದಿದೆ. ಡಿ. 27ರಂದು 2.53 ಲಕ್ಷ ರೂ.ಮೊತ್ತದ ಉತ್ಪನ್ನ ಮಾರಾಟವಾಗಿದೆ.