ಕುಮಾರಸ್ವಾಮಿ ಈಗ ತುಂಬಾ ಫ್ರೀಯಾಗಿದ್ದಾರೆ, ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲಿ: ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮುಗಿದಿದ್ದು, ಇವಿಎಂಗಳಲ್ಲಿ ಫಲಿತಾಂಶವನ್ನು ಸೀಲ್ ಮಾಡಲಾಗಿದೆ, ಆದರೆ ಡಿಕೆ ಶಿವಕುಮಾರ್ ಮತ್ತು ಎಚ್‌ಡಿ ಕುಮಾರಸ್ವಾಮಿ ನಡುವಿನ ಹೋರಾಟ ಇನ್ನೂ ಮುಗಿದಿಲ್ಲ.

ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಚುನಾವಣಾ ಫಲಿತಾಂಶ ಬಂದ ಬಳಿಕ ಡಾ ಸಿಎನ್ ಮಂಜುನಾಥ್ ಅವರನ್ನು ಯಾಕೆ ಬೆಂಗಳೂರು ರೂರಲ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದು ಅಂತ ಗೊತ್ತಾಗಲಿದೆ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ. ಅವರನ್ನು ಸ್ಪರ್ಧೆಗಿಳಿಸಿದ್ದಕ್ಕೆ ಬಹಳ ಸಂತೋಷ, ಕುಮಾರಸ್ವಾಮಿ ಏನಾದರೂ ಮಾತಾಡೋದಿದ್ದರೆ ಬೇಗ ಮಾತಾಡಲಿ, ತಡಮಾಡುವುದು ಬೇಡ, ಅವರೀಗ ಫ್ರೀ ಆಗಿರುವುದರಿಂದ ಕೇವಲ ಇದೊಂದೇ ವಿಚಾರ ಅಲ್ಲ, ಎಲ್ಲ ವಿಚಾರಗಳ ಬಗ್ಗೆ ಮಾತಾಡಲಿ ಎಂದು ಹೇಳಿದರು.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ನಡೆದ ಮತದಾನವನ್ನು ಉಲ್ಲೇಖಿಸಿದ ಅವರು, ಮತದಾರರ ಸಂಖ್ಯೆ ಮತ್ತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಎರಡಂಕಿಯ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!