ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಪ್ರದೇಶವನ್ನ ಮಂಗಳವಾರ ಅಂದ್ರೆ ಇಂದು ಸಂಜೆ 4 ರಿಂದ ನೋ ವೆಹಿಕಲ್ ಝೋನ್ ಪ್ರದೇಶವಾಗಿ ಮಾರ್ಪಾಡು ಮಾಡಲಾಗುತ್ತದೆ. ಇದೇ ನಿಯಮಗಳು ಪ್ರಯಾಗ್ ರಾಜ್ ನಲ್ಲಿ ಸಂಜೆ 6 ಗಂಟೆಯಿಂದ ಅನ್ವಯಿಸಲಿವೆ.
ಫೆಬ್ರವರಿ 26 ರಂದು ಮಹಾಶಿವರಾತ್ರಿಯೊಂದಿಗೆ ಮಹಾ ಕುಂಭಮೇಳದ ಕೊನೆಯ ವಿಶೇಷ ಸ್ನಾನ ಇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಜನದಟ್ಟಣೆಯನ್ನು ತಡೆಗಟ್ಟಲು ಈ ನಿರ್ಬಂಧಗಳನ್ನು ಹೇರಲಾಗಿದೆ.
ಹಾಲು, ತರಕಾರಿಗಳು, ಔಷಧಿಗಳು, ಇಂಧನ ಮತ್ತು ತುರ್ತು ವಾಹನಗಳ ಸಾಗಣೆ ಸೇರಿದಂತೆ ಅಗತ್ಯ ಸೇವೆಗಳಿಗೆ ನಿರ್ಬಂಧವಿರುವುದಿಲ್ಲ. ವೈದ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿಯಂತಹ ಸರ್ಕಾರಿ ಸಿಬ್ಬಂದಿಗಳು ಮುಕ್ತ ಸಂಚಾರ ಮಾಡಬಹುದಾಗಿದೆ.
ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಹಾಗೂ ಪ್ರಮುಖ ಘಾಟ್ ಗಳಲ್ಲಿ ನೂಕುನುಗ್ಗಲು ತಡೆಗಟ್ಟಲು ಭಕ್ತರು ತಮ್ಮ ಹತ್ತಿರದ ಘಾಟ್‌ಗಳಲ್ಲಿ ಸ್ನಾನ ಮಾಡಿ ಸ್ಥಳೀಯ ಶಿವ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡಲಾಗಿದೆ.