ಕ್ಯಾ ಬಡಿಯಾ ಮೇಕ್‌ ಅಪ್‌ ಕಿಯಾ ಹೇ: ಅಬ್ಬರದ ಪ್ರಚಾರದಲ್ಲಿ ಮೋದಿ ಗಮನಸೆಳೆದ ಬಾಲಕರ ವೇಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದಲ್ಲಿ ಜೌನ್‌ಪುರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣದ ನಡುವೆ ಸಭೆಯಲ್ಲಿದ್ದ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ ಅವರ ವೇಷ ತೊಟ್ಟಿದ್ದ ಇಬ್ಬರು ಬಾಲಕರನ್ನು ಗುರುತಿಸಿ, ‘ಯೇ ಕ್ಯಾ ಬಡಿಯಾ ಮೇಕ್‌ ಅಪ್‌ ಕಿಯಾ ಹೇ(ಅಬ್ಬಾ ಎಂಥಾ ಮೇಕಪ್‌ ಮಾಡಿದ್ದೀರಿ)’ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾದ ಕೃಪಾ ಶಂಕರ್‌ ಸಿಂಗ್‌ ಮತ್ತು ಬಿಪಿ ಸರೋಜ್‌ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಸಿಎಂ ಯೋಗಿ ಅವರ ಸಹಕಾರದೊಂದಿಗೆ ಇದೀ ಪೂರ್ವಾಂಚಲ ಪ್ರದೇಶದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ವೇಳೆ ಅವರು ಸಭೆಯ ನಡುವೆ ವಿಶೇಷ ಉಡುಗೆ ತೊಡುಗೆಯಲ್ಲಿ ಮಿಂಚುತ್ತಿದ್ದ ಇಬ್ಬರು ಬಾಲಕರನ್ನು ಗಮನಿಸಿ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾನೂನು ಸುವ್ಯವಸ್ಥೆ ಜಾರಿ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಶ್ಲಾಘಿಸಿದ ಮೋದಿ, ನೀವು ಸಮಾಜವಾದಿ ಪಾರ್ಟಿಯ ʼಗೂಂಡಾರಾಜ್’ನ ಹಳೆಯ ದಿನಗಳನ್ನು ನೋಡಿದ್ದೀರಿ. ಯೋಗಿಜಿ ನನ್ನ ʼಸ್ವಚ್ಛತಾ ಅಭಿಯಾನ’ವನ್ನು ಸರಿಯಾಗಿ ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಇದ್ದ ಗ್ಯಾಂಗ್‌ಗಳು, ಗಲಭೆಕೋರರು, ಮಾಫಿಯಾಗಳು, ಅಪಹರಣಕಾರರು ಮತ್ತು ಸುಲಿಗೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ ಎಂದಿದ್ದಾರೆ.

ಹತ್ತು ವರ್ಷಗಳ ಹಿಂದೆ ಇಲ್ಲಿ ಜನರು ದೇವರ ಭರವಸೆಯಲ್ಲಿ ಬದುಕುತ್ತಿದ್ದರು. ಕೆಲವು ಕಡೆ ಬಾಂಬ್ ದಾಳಿ, ಕೆಲವು ಕಡೆ ಸ್ಲೀಪರ್ ಸೆಲ್, ಕೆಲವು ಕಡೆ ಕೋಮು ಘರ್ಷಣೆ, ಇನ್ನು ಕೆಲವು ಕಡೆ ಭಯೋತ್ಪಾದನೆಯಿಂದ ಸಂಕಷ್ಟ ಪರಿಸ್ಥಿತಿ ಇತ್ತು. ಸಾವಿರಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಈ ಹಿಂದಿನ ಸರ್ಕಾರಗಳು ಅಂತಹ ದುಷ್ಟರಿಗೆ ಸಹಕಾರ ನೀಡುತ್ತಿದ್ದವು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!